ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರಸಾದರ ಮಹತ್ವಾಕಾಂಕ್ಷೆಯ ಮೇಘವೇ.. ಮೇಘವೇ..
ಸುದ್ದಿ/ಗಾಸಿಪ್
Feedback Print Bookmark and Share
 
ಖ್ಯಾತ ಗೀತ ರಚನೆಕಾರ ಡಾ.ನಾಗೇಂದ್ರ ಪ್ರಸಾದ್ ಏನನ್ನು ಮಾಡಿದರೂ ಓಹೋ ಎನ್ನುವಂತೆ ಇರಬೇಕು ಎಂದೇ ಆಶಿಸುತ್ತಾರೆ.

ಸುದೀಪ್‌ರನ್ನು ನಾಯಕರನ್ನಾಗಿಟ್ಟುಕೊಂಡು ಅವರು ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಅದರಲ್ಲಿ ಕಮಲಹಾಸನ್ ಅಭಿನಯದ ಸದ್ಮಾ ಚಿತ್ರದ ಛಾಯೆಯಿದೆ ಎಂಬ ಅಭಿಪ್ರಾಯ ಬಂದಾಗ ನಿರಾಕರಿಸಿದ್ದರು.

ಉತ್ತಮ ಅಭಿನಯ-ನಿರ್ದೇಶನವಿದ್ದೂ ನಲ್ಲ ಚಿತ್ರ ಅಷ್ಟೊಂದು ಯಶಸ್ವಿಯಾಗಲಿಲ್ಲ. ಇದರ ನಂತರ ಆದಿತ್ಯ ನಾಯಕತ್ವದಲ್ಲಿ ಅಂಬಿ ನಿರ್ದೇಶಿಸಿದರೂ ಅದರಲ್ಲೂ ಗಿಟ್ಟಲಿಲ್ಲ, ಗಿಮಿಕ್‌ಗಳೂ ವರ್ಕೌಟ್ ಆಗಲಿಲ್ಲ.

ಈಗ ಮೇಘವೇ ಮೇಘವೇ ಚಿತ್ರದ ಸರದಿ. ಇದಕ್ಕೆ ಹಿಂದಿಯ ಕಲಾವಿದೆಯೊಬ್ಬರನ್ನು ಕರೆಸಬೇಕು ಎಂದು ಹರಸಾಹಸ ಮಾಡಿದರು ನಾಗೇಂದ್ರ ಪ್ರಸಾದ್. ಅವರು ಕೇಳಿದಷ್ಟು ಹಣ ಕೊಡಲೂ ಸಿದ್ಧವಿದ್ದರು. ಅದರೆ ಕಲಾವಿದೆಯರು ಕಥೆ ಕೇಳಿ ಭೇಷ್ ಎನ್ನುತ್ತಿದ್ದರೇ ಹೊರತು ಕನ್ನಡದಲ್ಲಿ ಅಭಿನಯಿಸಲು ಹಿಂದೇಟು ಹಾಕುತ್ತಿದ್ದುದು ನಾಗೇಂದ್ರ ಪ್ರಸಾದ್ ಪಾಲಿಗೆ ಯಕ್ಷಪ್ರಶ್ನೆಯಾಗಿಯೇ ಉಳಿಯಿತು.

ಬೇಕಿದ್ದರೆ ರಜನೀಕಾಂತ್ ಜೊತೆಯಾದರೆ ಅಭಿನಯಿಸುವುದಾಗಿ ಸದರಿ ಕಲಾವಿದೆಯರು ಹೇಳಿದರು ಎಂಬ ಸುದ್ದಿಯೂ ಹಲವು ಪ್ರಶ್ನೆಗಳಿಗೆ ಕಾರಣವಾಯಿತು. ದಕ್ಷಿಣ ಭಾರತೀಯರು ಎಂದರೆ ಮದರಾಸಿಗಳು, ಇಲ್ಲಿನ ಚಿತ್ರರಂಗ ಎಂದರೆ ಕೇವಲ ರಜನೀಕಾಂತ್ ಮಾತ್ರ ಎಂದು ಉತ್ತರದವರು ಭಾವಿಸಿರುವುದೇ ಇದಕ್ಕೆ ಕಾರಣವಿರಬಹುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಒಟ್ಟಿನಲ್ಲಿ ಎರಡು ವೈಫಲ್ಯಗಳ ನಂತರ ನಾಗೇಂದ್ರ ಪ್ರಸಾದ್ ಯಶಸ್ವಿಯಾಗಲಿದ್ದಾರೆಯೇ? ಅಥವಾ ಮತ್ತೊಮ್ಮೆ ಗೀತರಚನೆಯಲ್ಲಿಯೇ ತೊಡಗಲಿದ್ದಾರೆಯೇ ಎಂಬುದನ್ನು ಕಾಲವೇ ಹೇಳಬೇಕಿದೆ.