ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಾಳಿಪಟ ಬಾಕ್ಸ್ ಆಫೀಸ್ ಧೂಳೀಪಟ ಮಾಡಲಿದೆಯೇ?
ಸುದ್ದಿ/ಗಾಸಿಪ್
Feedback Print Bookmark and Share
 
ನಥಿಂಗ್ ಸಕ್ಸೀಡ್ಸ್ ಲೈಕ್ ಸಕ್ಸಸ್ ಎನ್ನುವ ಮಾತೊಂದಿದೆ. ಯಶಸ್ಸು ಹೆಗಲಿಗೇರಿದರೆ ಅದರ ಹೊರತಾಗಿ ನಡೆಯುವುದು ಕಷ್ಟ. ಅದು ಖುಷಿಯನ್ನು ನೀಡುವುದರ ಜೊತೆಗೇ ಜವಾಬ್ದಾರಿಯನ್ನೂ ಹೊರಿಸುತ್ತದೆ.

ಹಾಗಾಗಿ ಯಶಸ್ಸಿನ ಗೆಣೆಕಾರರು ಎಚ್ಚರ ತಪ್ಪುವಂತಿಲ್ಲ. ಸದ್ಯದಲ್ಲಿಯೇ ಗಾಳಿಪಟ ಚಿತ್ರ ಬಿಡುಗಡೆಯಾಗಲಿರುವುದು ಇಷ್ಟೆಲ್ಲಾ ಮಾತುಗಳಿಗೆ ಕಾರಣ.

ಈ ಚಿತ್ರದಲ್ಲಿ ಪ್ರತಿಭಾವಂತರ ಮೇಳವೇ ಸೇರಿದೆ. ಮುಂಗಾರು ಮಳೆಯ ಯಶಸ್ಸಿನಲ್ಲಿ ಇನ್ನೂ ಮೀಯುತ್ತಿರುವ ಯೋಗರಾಜಭಟ್ ಮತ್ತು ಗಣೇಶ್, ಯಶಸ್ವೀ ಸಂಗೀತ ನಿರ್ದೇಶಕ ಹರಿಕೃಷ್ಣ, ಅಪ್ರತಿಮ ಛಾಯಾಗ್ರಾಹಕ ರತ್ನವೇಲು ಮೊದಲಾದವರೆಲ್ಲಾ ಇರುವಾಗ ನೀರೀಕ್ಷೆ ಸಹಜವೇ. ವಾಹಿನಿಗಳ ಮೂಲಕ ಬಿತ್ತರಗೊಳ್ಳುತ್ತಿರುವ ಈ ಚಿತ್ರದ ಪ್ರೊಮೋಗಳು ಆಸಕ್ತಿ ಹುಟ್ಟಿಸುವಂತಿದ್ದು ಗಾಳಿಪಟ ಯುವಜನರ ಮೆಚ್ಚುಗೆಯ ಚಿತ್ರವಾಗಲಿದೆ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಮಾತು.

ಗ್ರಾಂಥಿಕ ಸಂಭಾಷಣೆಯ ಮೊರೆ ಹೋಗದೆ ಪಡ್ಡೆಹುಡುಗರ ಶೈಲಿಯ ಸಂಭಾಷಣೆ ಚಿತ್ರದಲ್ಲಿ ಇಣುಕುವುದು ಪ್ರಾಯಶಃ ಪ್ಲಸ್ ಪಾಯಿಂಟ್ ಆಗಲಿದೆ. ಜೊತೆಗೆ ಕಾಮಿಡಿ ಟ್ರಾಕ್ ಈ ಚಿತ್ರದ ಕಥೆಯೊಂದಿಗೇ ಬೆರೆತಿರುವುದು ಚಿತ್ರದ ಗೆಲುವಿಗೆ ಕಾರಣವಾಗಲಿದೆ ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿದೆ.

ಈ ಚಿತ್ರ ಮುಂಗಾರು ಮಳೆಯಂಥಾ ಯಶಸ್ಸನ್ನೇ ಮತ್ತೊಮ್ಮೆ ದಾಖಲಿಸಿದರೆ 2008ರಲ್ಲೂ ಮತ್ತೊಮ್ಮೆ ಗಣೇಶೋತ್ಸವಕ್ಕೆ ಚಿತ್ರರಂಗ ಸಾಕ್ಷಿಯಾಗಲಿದೆ. ಈಗಾಗಲೇ ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ ಚಿತ್ರಗಳ ಯಶಸ್ಸು ಗಣೇಶ್ ಹೆಗಲಿಗೇರಿರುವುದು ಹೀಗೆ ಲೆಕ್ಕಾಚಾರ ಹಾಕುವಂತೆ ಮಾಡಿದೆ.