ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೊಂಗನಸು - ನನಸು ಮಾಡಲಿದೆಯೇ ಪ್ರೇಮ್ ಕನಸು?
ಸುದ್ದಿ/ಗಾಸಿಪ್
Feedback Print Bookmark and Share
 
ನಾಯಕನಟ ಪ್ರೇಮ್ ತಕ್ಷಣಕ್ಕೀಗ ಒಂದು ಯಶಸ್ಸು ಬೇಕಾಗಿದೆ. ಪ್ರಾಣ ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಅವರು ಪ್ರವೇಶಿಸಿದರೂ ಅದು ಬಂದಿದ್ದೂ ಗೊತ್ತಾಗಲಿಲ್ಲ, ಹೋಗಿದ್ದೂ ಗೊತ್ತಾಗಲಿಲ್ಲ.

ಹೊಸಬರೇ ಸೇರಿ ನಿರ್ಮಿಸಿದ ನೆನಪಿರಲಿ ಚಿತ್ರ ಪ್ರೇಮ್ ಸೇರಿದಂತೆ ಹಲವರಿಗೆ ಜೀವ ನೀಡಿತು. ರತ್ನಜ ಎಂಬ ನಿರ್ದೇಶಕರನ್ನು, ಅಜಯ್‌ಗೌಡ ಎಂಬ ನಿರ್ಮಾಪಕರನ್ನು ಈ ಉದ್ಯಮಕ್ಕೆ ನೀಡಿದ್ದಷ್ಟೇ ಅಲ್ಲದೇ ಹಂಸಲೇಖಾರಿಗೆ ಮರುಜನ್ಮ ಸಿಕ್ಕಿದ್ದೂ ಈ ಚಿತ್ರದಿಂದಲೇ.

ಅದಾದ ನಂತರ ಜೊತೆ ಜೊತೆಯಲಿ ಚಿತ್ರವೂ ಯಶಸ್ಸಾಯಿತು. ಇನ್ನೇನು ಪ್ರೇಮ್ ಬಿಗಿಯಾಗಿ ಕಚ್ಚಿಕೊಂಡರು ಎನ್ನುವಷ್ಟರಲ್ಲೇ ಸವಿ ಸವಿ ನೆನಪು, ಪಲ್ಲಕ್ಕಿ, ಗುಣವಂತ ಚಿತ್ರಗಳ ಸೋಲು ಅವರನ್ನು ಮತ್ತೊಮ್ಮೆ ಆತ್ಮವಿಮರ್ಶೆಗೆ ಒಡ್ಡಿವೆ. ಅವರಿಗೆ ತಕ್ಷಣಕ್ಕೀಗ ಒಂದು ಯಶಸ್ಸು ಬೇಕಿದೆ.

ನೆನಪಿರಲಿ ತಂಡವೇ ನಿರ್ಮಿಸಿರುವ ಹೊಂಗನಸು ಚಿತ್ರ ಈ ದಿಸೆಯಲ್ಲಿ ಅವರಿಗೆ ನೆರವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.