ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಜಾಗತೀಕರಣ ಮಾರಕ-ಸೀತಾರಾಂ
ಸುದ್ದಿ/ಗಾಸಿಪ್
Feedback Print Bookmark and Share
 
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿದ್ದ ಪ್ರೊ. ನಂಜುಂಡಸ್ವಾಮಿ ಅವರು ಜಾಗತೀಕರಣವನ್ನು ವಿರೋಧಿಸಿ ಹೋರಾಟ ಮಾಡಿದ್ದರು. ಜಾಗತೀಕರಣ ಹಾಗೂ ಉದಾರೀಕರಣ ನಮ್ಮ ರಾಷ್ಟ್ರದ ರೈತರಿಗೆ ಮಾರಕ ಎಂದಿದ್ದರು.

ಯಾರಿಗೆ ಒಪ್ಪಿಗೆ ಇಲ್ಲದಿದ್ದರೂ ನಮ್ಮ ಭಾರತ ಜಾಗತೀಕರಣವನ್ನು ಅಪ್ಪಿಕೊಂಡಿದೆ. ಅದು ಬೇರೆ ಮಾತು. ಅವರ ಶಿಷ್ಯರೆಂದೇ ಹೇಳಿಕೊಳ್ಳುವ ಚಲನಚಿತ್ರ ಹಾಗೂ ಧಾರಾವಾಹಿಗಳ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ಅವರು ತಮ್ಮ ಧಾರಾವಾಹಿಗಳಲ್ಲಿ ಜಾಗತೀಕರಣದಿಂದ ಆಗುವ ಅನಾಹುತಗಳನ್ನು ಜನರಿಗೆ ತಿಳಿಸುವ ಯತ್ನ ನಡೆಸಿದ್ದರು.

ಇತ್ತೀಚಿಗೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ನಮ್ಮೂರ ಚಿತ್ರೋತ್ಸವ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಅವರು ತಮ್ಮ ವಿಚಾರಧಾರೆಯನ್ನು ಹರಿಬಿಟ್ಟರು. ಪ್ರಸ್ತುತ ಮಾಧ್ಯಮಗಳ ಬೇಜವಾಬ್ದಾರಿಯನ್ನು ಖಂಡಿಸಿ ಮಾತನಾಡಿದ ಅವರು ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮಾಧ್ಯಮಗಳು ಸ್ವತಂತ್ರ ಭಾರತದ ನಿರ್ಮಾಣದ ಕುರಿತಾಗಿತ್ತು. ನಂತರ ಪ್ರಾಮಾಣಿಕತೆಯೇ ಕೇಂದ್ರ ಬಿಂದುವಾಗಿತ್ತು. ಈಗೇನಾಗಿದೆ ಎಂದು ಪ್ರಶ್ನಿಸಿದ ಅವರು ಅದಕ್ಕೆ ಉತ್ತರವನ್ನೂ ತಾವೇ ನೀಡಿದರು. ಮಾಧ್ಯಮಗಳು ಪರದೇಸಿ ಸಂಸ್ಸ್ಕತಿಯನ್ನು ಹಂಚುವಲ್ಲಿ ಪೈಪೋಟಿ ನಡೆಸುತ್ತಿವೆ ಎಂದು ಟೀಕಿಸಿದರು.

ಪರದೇಶಗಳಿಂದ ಅಮದಾಗುವ ಸರಕುಗಳ ಮುಂದೆ ನಮ್ಮ ರೈತರು ಕಂಗಾಲಾಗಿ ಕುಳಿತಿದ್ರೆ ಸಿನಿಮಾ ನಟನೊಬ್ಬ ಪರದೇಶಿ ಕೋಲಾಗಳನ್ನು ಕುಡಿಯಿರಿ ಎನ್ನುತ್ತಾನೆ. ಅದು ಪರೋಕ್ಷವಾಗಿ ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳಿ ಎಂದೇ ಹೇಳಿದಂತಾಗುತ್ತದೆ. ತಾವೂ ಒಂದು ಮಾಧ್ಯಮದ ಪ್ರತಿನಿಧಿಯಾಗಿದ್ದು, ಇಂಥ ಮಾತುಗಳನ್ನಾಡಲು ಮುಜುಗರವಾಗುತ್ತದೆ ಎಂದು ಹೇಳಿದರು.