ಮೊಗ್ಗಿನ ಮನಸುಗೆ ಹಿನ್ನೆಲೆ ಸಂಗೀತ
ಬೆಂಗಳೂರು, ಶುಕ್ರವಾರ, 11 ಜನವರಿ 2008( 13:44 IST )
ಇ.ಕೆ. ಎಂಟರ್ಲೈನರ್ ಲಾಂಛನದಲ್ಲಿ ಇ. ಕೃಷ್ಣಪ್ಪ ಅವರು ನಿರ್ಮಿಸುತ್ತಿರುವ ದ್ವಿತೀಯ ಕಾಣಿಕೆ ಮೊಗ್ಗಿನ ಮನಸು ಚಿತ್ರಕ್ಕೆ ಬಾಣಸವಾಡಿಯ ಸ್ಟೀಫನ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಕಾರ್ಯ ಪೂರ್ಣವಾಗಿದೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ ಮುಂಗಾರು ಮಳೆ ನಿರ್ಮಾಪಕರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಹದಿಹರೆಯದವರ ಮನಸಿನ ಸುತ್ತ ಹೆಣೆಯಲಾದ ಕಥೆಯುಳ್ಳ ಈ ಚಿತ್ರವನ್ನು ಶಶಾಂಕ್ ಅವರು ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಮನರಂಜನೆಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಆರು ಹಾಡುಗಳು ಹಾಗೂ ನಾಲ್ಕು ಬಿಟ್ಸ್‌ಗಳಿದ್ದು, ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಅವರು ಸಂಗೀತ ಸಂಯೋಜಿಸಿದ್ದಾರೆ.
ಎ. ಚಂದ್ರಶೇಖರ್ ಛಾಯಾಗ್ರಹಣ, ಪ್ರಕಾಶ್ ಸಂಕಲನ, ಜಯಂತ್ ಕಾಯ್ಕಿಣಿ, ಶಶಾಂಕರ ಗೀತ ರಚನೆ ಈ ಚಿತ್ರಕ್ಕಿದೆ.
ಜಿ. ಗಂಗಾಧರ್ ಕಾರ್ಯಕಾರಿ ನಿರ್ಮಾಕರಾಗಿರುವ ಮೊಗ್ಗಿನ ಮನಸು ತಾರಾಬಳಗದಲ್ಲಿ ಶುಭಾ ಪೂಂಜ, ರಾಧಿಕಾ ಪಂಡಿತ್, ಸಂಗೀತಾ ಶೆಟ್ಟಿ, ಮಾನಸಿ, ರಾಜೇಶ್, ಯಶ್, ಸ್ಕಂದ, ಮನೋಜ್ ಹರ್ಷ, ಜೆ.ಡಿ. ನಾಗರಾಜ್, ಜೈಜಗದೀಶ್, ಭವ್ಯ, ಅಚ್ಯುತರಾವ್, ಸುಧಾ ಬೆಳವಾಡಿ, ಮಾ. ಕಿಶನ್, ಎಚ್.ಜಿ. ಮಹದೇವ್, ತುಳಸಿ ಮುಂತಾದವರಿದ್ದಾರೆ.