ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಂಸಲೇಖಾರ ಮಾತಿನ ಸುರುಳಿ
ಸುದ್ದಿ/ಗಾಸಿಪ್
Feedback Print Bookmark and Share
 
ಹಂಸಲೇಖ ಅವರ ವಾಗ್ಝರಿಯಲ್ಲಿ ಅನೇಕ ವಿಷಯಗಳು ಹೊರಬರುತ್ತವೆ. ಇಂದಿಗೆ ಪ್ರಸ್ತುತವಾಗಿರುವ ಎಷ್ಟೋ ವಿಷಯಗಳನ್ನು ಹೇಳಿ ತಿಳಿವಳಿಕೆ ಮೂಡಿಸುವಲ್ಲಿ ಅವರು ನಿಸ್ಸೀಮರು.

ಯುಗಯುಗಗಳೇ ಸಾಗಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಮಾತು ಕೇಳಿದವರು ಚಿತ್ರರಂಗದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಪಾಠ ಕಲಿತಂತಾಯಿತು. ಈಗ ಕನ್ನಡ ಚಿತ್ರರಂಗ ಹೊಸಬರಿಗೆ ಅವಕಾಶ ನೀಡುವ ವೇದಿಕೆ ಯಾಗುತ್ತಿದೆ. ಲ್ಯಾಂಡ್ ಮಾಫಿಯಾ, ಭೂಗತ ಜಗತ್ತು, ರಾಜಕಾರಣಿಗಳು ಚಿತ್ರರಂಗದಲ್ಲಿ ಹಣ ತೊಡಗಿಸುತ್ತಿದ್ದಾರೆ. ದುಡ್ಡು ಹೇಗಾದರೂ ಬರಲಿ, ಅದು ಕನ್ನಡದವರ ಹಣ. ಅಂಥ ಹಣ ಕನ್ನಡದ ಕಲೆಗಾಗಿ ವೆಚ್ಚವಾಗುತ್ತಿದೆ ಎಂದು ಸಮಾಧಾನ ಪಟ್ಟುಕೊಂಡ ಹಂಸಲೇಖ ಅವರು ಇಂಥ ಸಮಯದಲ್ಲಿ ಅವಕಾಶ ಸಿಕ್ಕವರು ಸರಿಯಾಗಿ ಬಳಸಿಕೊಂಡರೆ ಅವರಿಗೊಂದು ನೆಲೆ ಸಿಗುವಂತಾಗುತ್ತದೆ. ಈಗ ದೊರೆತ ಅವಕಾಶ ಕಳೆದುಕೊಂಡರೆ ಅಂಥ ಅವಕಾಶ ಮುಂದೆ ಬಾರದಿರಬಹುದು ಎಂದು ಹೇಳಿದರು.

ಕನ್ನಡ ಚಿತ್ರಗಳ ಕತೆಗಳು ಈಗ ಚೆನ್ನಾಗಿವೆ. ಹಾಗೇ ಹೊಸ ಪ್ರತಿಭೆಗಳು ಬರುತ್ತಿವೆ ಎಂದು ಸಂತಸ ಪಟ್ಟರು. ಆದರೆ ಕಲಾವಿದರಲ್ಲಿ ಹಾಗೂ ತಂತ್ರಜ್ಞರಲ್ಲಿ ವಿನಯ ವಿಧೇಯತೆ ಇಲ್ಲ ಎಂಬುದು ಅವರ ದೂರು.

ತಮಗೆ ಚಿತ್ರರಂಗದಲ್ಲಿ ಸ್ಥಾನ ದೊರೆಯುವಂತೆ ಮಾಡಿದ ರವಿಚಂದ್ರನ್ ಅವರಿಗೆ ತನಗೆಂಥಾ ಪ್ರತಿಭೆ ಇದೆ ಎಂದು ಗೊತ್ತಿಲ್ಲ, ಅವರು ಚಿತ್ರರಂಗದ ಶಾಲೆ ಇದ್ದಂತೆ. ಅವರ ಗರಡಿಯಿಂದ ಬಂದ ತಾವು ಧನ್ಯರು, ಅವರಿಂದ ತಾವು ಕಲಿತದ್ದನ್ನು ಬೇರೆಯವರಿಗೆ ಧಾರೆಯೆರೆಯುತ್ತಿರುವುದಾಗಿ ಹೇಳಿದರು.

ಅವರ ತಂದೆ ವೀರಾಸ್ವಾಮಿ ಅವರ ಗರಡಿಯಿಂದ ವಿಷ್ಣುವರ್ಧನ್, ಅಂಬರೀಷ್ ಮುಂತಾದವರ ಪಡೆಯೇ ಬಂತು ಎಂದು ತಿಳಿಸಿದರು. ತಮಗೆ ಕೆಲಸವಿಲ್ಲದಿದ್ದರೂ ದೊಡ್ಡ ಸ್ಟಾರ್‌ಗಳಿಗೆ ಸೆಲ್ಯೂಟ್ ಹೊಡೆಯಲು ಮನಸು ಬರುವುದಿಲ್ಲ, ಹಾಗಾಗಿ ಕೆಲಸ ಇಲ್ಲದೇ ಮನೆಯಲ್ಲಿ ಕುಳಿತಾಗ ಕೈಹಿಡಿದು ಎತ್ತಿದ್ದು ಹೊಸಬರು ಎಂದು ಹಂಸಲೇಖಾ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು.