ಮಾತಾಡು ಸಾಕೆ ಚಿತ್ರ ನಿರ್ಮಾಣ
ಬೆಂಗಳೂರು, ಶುಕ್ರವಾರ, 11 ಜನವರಿ 2008( 13:46 IST )
ಮೂಲತಃ ನೃತ್ಯಗಾರರಾಗಿರುವ, ಬೆಂಗಳೂರಿನ ವಿಜಯನಗರ ಹಾಗೂ ಮಲ್ಲೇಶ್ವರದಲ್ಲಿ ನೃತ್ಯ ಶಾಲೆ ನಡೆಸುತ್ತಿರುವ ರಾಮಚಂದ್ರ ದೊರೆ ಅವರು ಖ್ಯಾತ ಉದ್ಯಮಿ ಹರಿಖೋಡೆ ಅವರ ಸಹಕಾರದೊಂದಿಗೆ ಶ್ರೀಮಾತಾಪಿತ ಫಿಲಂ ಕಂಬೈನ್ಸ್ ಲಾಂಛನದಡಿಯಲ್ಲಿ ಮಾತಾಡೆ ಸಾಕು ..007 ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ವಿಶೇಷವಾದ ಟೈಟಲ್ ಇರುವ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದೇ ಅಲ್ಲದೇ ಕತೆ, ಚಿತ್ರಕತೆ, ಸಂಭಾಷಣೆ, ಗೀತ ರಚನೆ ಹಾಗೂ ಸಂಗೀತ ರಚನೆಯ ಹೊಣೆಯನ್ನೂ ಹೊತ್ತಿದ್ದಾರೆ.
ಬೆಂಗಳೂರು, ಮಂಗಳೂರು, ಮುಂಬಯಿ, ಕೇರಳ, ಕೆಜಿಎಫ್ ಮುಂತಾದ ಕಡೆ 50 ದಿನಗಳ ಷೆಡ್ಯೂಲ್‌ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಜಗತಿಬಾಬು ಛಾಯಾಗ್ರಹಣವಿರುವ ಈ ಚಿತ್ರದ ಇತರ ತಾರಾಗಣದಲ್ಲಿ ಹೇತಲ್ (ಮುಂಬೈ), ದೀಪಕ್, ಕನಕ (ಗುಜರಾತ್), ಗೀರೀಶ್ ಕಾರ್ನಾಡ್, ಗುರುರಾಜ್ ಹೊಸಕೋಟೆ, ಹರೀಶ್ ರೈ, ರಾಜೇಶ್ ಮುಂತಾದವರಿದ್ದಾರೆ.