ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಯೂರ ನಿರ್ದೇಶಕರು ಯಾರು?
ಸುದ್ದಿ/ಗಾಸಿಪ್
Feedback Print Bookmark and Share
 
ಪುನೀತ್ ರಾಜ್‌ಕುಮಾರ್ ಅಭಿನಯದ ಮಯೂರ ಚಿತ್ರವನ್ನು ನಿರ್ದೇಶಿಸಬೇಕಿದ್ದ ಶೋಬನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸ್ಥಾನವನ್ನು ಈಗ ತುಂಬುವವರಾರು ಎಂಬ ಜಿಜ್ಞಾಸೆಯಲ್ಲಿ ಚಿತ್ರತಂಡ ಮುಳುಗಿದೆ.

ಮಯೂರ ಚಿತ್ರದಲ್ಲಿ ವಕೀಲರ ಪಾತ್ರದಲ್ಲಿ ಪುನೀತ್ ಪ್ರಪ್ರಥಮ ಬಾರಿಗೆ ಅಭಿನಯಿಸುತ್ತಿದ್ದು ಅವರಿಗೆ ಇಬ್ಬರು ನಾಯಕಿಯರು. ಒಬ್ಬರು ಬಾಲಿವುಡ್ ಶ್ರದ್ದಾ ಆರ್ಯ, ಮತ್ತೊಬ್ಬರು ತಮಿಳಿನ ಸಂಧ್ಯಾ.

ಮೂಲತಃ ತೆಲುಗಿನವರಾಗಿದ್ದೂ ಕನ್ನಡದೆಡೆಗೆ ಅಪಾರ ಕಾಳಜಿ ಹೊಂದಿದ್ದರು ನಿರ್ದೇಶಕ ಶೋಬನ್. ಸರಳತೆಯನ್ನು ತುಂಬಾ ಮೆಚ್ಚುತ್ತಿದ್ದ ಶೋಬನ್ ಇದೇ ಕಾರಣಕ್ಕಾಗಿ ಐಷಾರಾಮಿ ಹೊಟೇಲಿಗೆ ಬದಲು ತಾವು ಉಳಿಯಲು ಯಾವುದಾದರೊಂದು ಮನೆಯ ವ್ಯವಸ್ಥೆ ಮಾಡಿಕೊಟ್ಟರೆ ಸಾಕು ಎಂದೇ ಹೇಳುತ್ತಿದ್ದರಂತೆ. ತೆಲುಗಿನ ವರ್ಷಂ ಎಂಬ ಸೂಪರ್‌ ಹಿಟ್ ಚಿತ್ರವನ್ನು ಕೊಟ್ಟರೂ ಯಶಸ್ಸು ಅವರ ತಲೆಗೇರಿರಲಿಲ್ಲ ಎಂಬುದಕ್ಕೆ ಅವರ ಈ ಸರಳತೆಯೇ ಸಾಕ್ಷಿ ಎನ್ನುತ್ತದೆ ಮಯೂರ ಚಿತ್ರತಂಡ.

ಪುನೀತ್ ಆಕಾಶ್, ಅರಸು ಚಿತ್ರಗಳನ್ನು ನಿರ್ದೇಶಿಸಿದ ಮಹೇಶ್ಬಾಬು ನಿರ್ದೇಶನದ ಚುಕ್ಕಾಣಿಯನ್ನು ಹಿಡಿಯುವ ಸಾಧ್ಯತೆಗಳೇ ಹೆಚ್ಚಾಗಿವೆ. ಅವರು ಸದ್ಯಕ್ಕೆ ಪ್ರಜ್ವಲ್ ನಾಯಕತ್ವದ ಮೆರವಣಿಗೆ ಚಿತ್ರದ ತಾಂತ್ರಿಕ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಮಯೂರ ಚಿತ್ರತಂಡದವರೊಂದಿಗೆ ಚರ್ಚೆಯಾದ ನಂತರ ಈ ಕುರಿತು ಅಭಿಪ್ರಾಯ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ.