ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರಂತರ ಚಿತ್ರೀಕರಣ ನಡೆಸಿರುವ ಕೆಎ 99 ಬಿ 333 ಚಿತ್ರ
ಸುದ್ದಿ/ಗಾಸಿಪ್
Feedback Print Bookmark and Share
 
ಮುಂಚೆಯೆಲ್ಲಾ ಕವಿತೆಗಳ ಸಾಲನ್ನೋ, ಮಹಾನ್‌ಕೃತಿಗಳ ಹೆಸರನ್ನೋ ತಮ್ಮ ಚಿತ್ರಕ್ಕೆ ಇಡುವುದು ವಾಡಿಕೆಯಾಗಿತ್ತು. ಆದರೆ ಕಾಲ ಬದಲಾದಂತೆ, ಜನರ ಅಭಿರುಚಿ ಬದಲಾದಂತೆ ಚಿತ್ರಗಳ ಟೈಟಲ್‌ಗಳೂ ಬದಲಾವಣೆ ಕಾಣುತ್ತಿವೆ. ಅಂಥ ಒಂದು ಚಿತ್ರ ಕೆಎ 99 ಬಿ 333.

ಸುನಿಲ್ ಮತ್ತು ದೀಪಾಚಾರಿ ನಾಯಕ-ನಾಯಕಿಯರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಜಿ.ಅರುಣ್‌ಕುಮಾರ್ ಅವರ ನಿರ್ದೇಶನವಿದೆ. ಕಥೆ-ಚಿತ್ರಕಥೆ-ಸಂಭಾಷಣೆಯೂ ಅವರದೇ. ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಅವಕ್ಕೆ ಸಂಗೀತರಾಜ್ ಸಂಗೀತ ಸಂಯೋಜಿಸಿದ್ದಾರೆ. ಇವುಗಳ ಪೈಕಿ ಎರಡು ಹಾಡುಗಳನ್ನು ಕುಂದಾಪುರ, ಸಾಗರ ಹಾಗೂ ಮಂಗಳೂರುಗಳ ರಮ್ಯ ತಾಣಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಉದ್ದೇಶಿಸಿದೆ.

ಶ್ರೀಹರ್ಷ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಮೂನ್ರಾಜ್ ಸಂಕಲನ ಹಾಗೂ ನಿತ್ಯಾ ಭದ್ರಾವತಿಯವರ ಸಹ ನಿರ್ದೇಶನವನ್ನು ಹೊಂದಿರುವ ಈ ಚಿತ್ರದ ಇತರ ಪಾತ್ರಗಳಲ್ಲಿ ಆನಂದ್, ಅಜಯ್ ರತ್ನಂ, ಅನಿತಾರಾಣಿ, ಬ್ಯಾಂಕ್ ಜನಾರ್ಧನ್, ಕಾಶಿ, ಕರಿ ಬಸವಯ್ಯ ಇವರೇ ಮೊದಲಾದ ಕಲಾವಿದರು ಅಭಿನಯಿಸುತ್ತಿದ್ದಾರೆ.