ಅನನ್ಯ ಅನುಭವಗಳ ಗಂಗಾ ಕಾವೇರಿ
ಬೆಂಗಳೂರು, ಶನಿವಾರ, 12 ಜನವರಿ 2008( 13:32 IST )
ಕೆಲವೊಂದು ಚಿತ್ರಗಳಲ್ಲಿ ಪತ್ರಿಕಾ ಗೋಷ್ಠಿಯ ಸನ್ನಿವೇಶಗಳಿದ್ದರೆ ಪತ್ರಕರ್ತರನ್ನೇ ಆ ಚಿತ್ರದಲ್ಲಿ ಅಭಿನಯಿಸುವಂತಹ ಸನ್ನಿವೇಶಗಳನ್ನು ನಿರ್ದೇಶಕರು ಸೃಷ್ಟಿಸಿರುವ ಉದಾಹರಣೆಗಳಿವೆ.
ಖ್ಯಾತ ನಿರ್ದೇಶಕ ಫಣಿ ರಾಮಚಂದ್ರ ತಮ್ಮ ಒಂದೆರಡು ಚಿತ್ರಗಳಲ್ಲಿ ಈ ಬಗೆಯ ಗಿಮಿಕ್ ಪ್ರದರ್ಶಿಸಿದ್ದಾರೆ. ಸಿನಿ ಪತ್ರಕರ್ತ ಎ.ಎಸ್.ಮೂರ್ತಿಯವರೂ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಸಾಲಿಗೆ ಇತ್ತೀಚಿನ ಸೇರ್ಪಡೆ ಗಣೇಶ್-ಗಣಪತಿ.
ಇದೇನು ಒಂದೇ ಹೆಸರಿನ ಗಿಮಿಕ್ಕೇ ಎಂದು ಅಚ್ಚರಿಯಾಗಬೇಡಿ. ಇದು ನಿಜ ಪತ್ರಕರ್ತರ ವಲಯದಲ್ಲಿ ಅಣ್ಣ ತಮ್ಮ ಎಂದೇ ಹೆಸರಾದ ಗಣೇಶ್ ಕಾಸರಗೋಡು ಹಾಗೂ ಬಿ.ಗಣಪತಿ ಗಂಗಾ ಕಾವೇರಿ ಚಿತ್ರದಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು ಹಿಮಾಲಯದ ತಪ್ಪಲಿನಲ್ಲಿ ನಡೆದ ಚಿತ್ರೀಕರಣದ ಸಂದರ್ಭದಲ್ಲಿ ಆದ ವಿಶಿಷ್ಟ ಅನುಭವಗಳನ್ನು ಈರ್ವರೂ ಅಲ್ಲಲ್ಲಿ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಿ.ಗಣಪತಿಯವರದು ಆಯುರ್ವೇದ ಪಂಡಿತನ ಪಾತ್ರ.
ಹಿಮಾಲಯದಲ್ಲಿ ಒಂದು ಹಂತದ ಚಿತ್ರೀಕರಣ ಮುಗಿಸಿಕೊಂಡು ಬಂದ ತಂಡ ಬೆಂಗಳೂರಿನ ರಾಕ್ಲೈನ್ ಸ್ಡುಡಿಯೋದಲ್ಲಿ ಚಿತ್ರೀಕರಣವನ್ನು ಮುಂದುವರಿಸಿದೆ. ಅಕ್ಷಯ್, ಮಲ್ಲಿಕಾ ಕಪೂರ್, ಅನಂತ್‌ನಾಗ್, ರೂಪಾದೇವಿ, ತಾರಾ, ರಮೇಶ್ಭಟ್ ತಾರಾಗಣದಲ್ಲಿರುವ ಇತರರು. ನಿದೇರ್ಶಕ ವಿಷ್ಣುಕಾಂತ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ವೇಣುರವರ ಛಾಯಾಗ್ರಾಹಣ ಹಾಗೂ ಫೈವ್‌ಸ್ಟಾರ್ ಗಣೇಶ್ ಅವರ ಸಾಹಸ ಚಿತ್ರಕ್ಕಿರುವುದು ವಿಶೇಷ