ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಡಬ್ಬಿಂಗ್ ಹಂತದಲ್ಲಿ ಸತ್ಯ ಇನ್ ಲವ್
ಸುದ್ದಿ/ಗಾಸಿಪ್
Feedback Print Bookmark and Share
 
ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸಿರುವ ಸತ್ಯ ಇನ್ ಲವ್ ಚಿತ್ರ ಹಲವು ಕಾರಣಗಳಿಗೆ ಕುತೂಹಲ ಕೆರಳಿಸಿದೆ. ವಿಭಿನ್ನ ಗೆಟಪ್‌ನಲ್ಲಿ ಶಿವಣ್ಣ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದೇ ಈ ಕುತೂಹಲಕ್ಕೆ ಕಾರಣ.

ಜೊತೆಗೆ ಚಿತ್ರದ ಕಥೆಯ ಅಗತ್ಯದಂತೆ ಮಂತ್ರಾಲಯದ ಶ್ರೀ ಗುರುರಾಘವೇಂದ್ರರ ಸನ್ನಿಧಿಯಲ್ಲೂ ಜನರ ಮಧ್ಯೆಯೇ ಚಿತ್ರೀಕರಣವನ್ನು ನಡೆಸಿರುವುದು ಎಲ್ಲರ ಆಸಕ್ತಿಗೆ ಕಾರಣವಾಗಿದೆ.

ಈಗ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಮಾತುಗಳ ಜೋಡಣಾ ಕಾರ್ಯ ನಡೆದಿದೆ. ಚಿತ್ರದ ಇತರ ತಾರಾಗಣದಲ್ಲಿ ವಿನಯಾ ಪ್ರಕಾಶ್, ವಿಜಯಕಾಶಿ, ಸಂಗೀತಾ, ಶರಣ್ ಮೊದಲಾದವರಿದ್ದು ತಮಿಳಿನ ಬೆಡಗಿ ಜೆನಿಲಿಯಾ ನಾಯಕಿ ಪಾತ್ರದಲ್ಲಿರುವುದು ಚಿತ್ರದ ಆಕರ್ಷಣೆಯನ್ನು ಹೆಚ್ಚಿಸಿದೆ.

ಇದು ನಿರ್ದೇಶಕ ರಾಘವ ಲೋಕಿಯವರ ಪ್ರಥಮ ಪ್ರಯತ್ನ. ನಿರ್ದೇಶನದೊಂದಿಗೆ ಕಥೆ-ಚಿತ್ರಕಥೆಯ ಹೊಣೆಯನ್ನೂ ಅವರು ಹೊತ್ತಿದ್ದಾರೆ. ನಿರ್ದೇಶಕ ಪ್ರೇಮ್‌ರವರ ತಂಡದಲ್ಲಿ ದುಡಿಯುತ್ತಿದ್ದ ಮಳವಳ್ಳಿ ಸಾಯಿಕೃಷ್ಣ ಈ ಚಿತ್ರಕ್ಕೆ ಸಂಭಾಷಣೆ ಒದಗಿಸಿದ್ದಾರೆ.

ಹಾಡುಗಳು ವಿಭಿನ್ನವಾಗಿರಲಿ ಎಂಬ ದೃಷ್ಟಿಯಿಂದ ವಿ.ಮನೋಹರ್, ಹೃದಯಶಿವ ಹಾಗೂ ಕವಿರಾಜ್‌ರವರಿಂದ ಹಾಡುಗಳನ್ನು ಬರೆಸಲಾಗಿದೆಯಂತೆ. ಇವಕ್ಕೆ ಗುರುಕಿರಣ್ ಸಂಗೀತ ನೀಡಿರುವುದರಿಂದ ಫುಟ್ ಟ್ಯಾಪಿಂಗ್ ಟ್ಯೂನ್‌ಗಳಿಗೇನೂ ಮೋಸವಿಲ್ಲ ಎಂಬುದು ಚಿತ್ರರಸಿಕರ ನೀರೀಕ್ಷೆ.