ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗುಬ್ಬಚ್ಚಿ ಹಾರಿಸಲಿರುವ ಸುರೇಶ್
ಸುದ್ದಿ/ಗಾಸಿಪ್
Feedback Print Bookmark and Share
 
ಸಂಭಾಷಣೆಕಾರ ಸುರೇಶ್ ಎಂದರೆ ಕೆಲವರಿಗೆ ಬೇಗ ಅರ್ಥವಾಗುವುದಿಲ್ಲ. ಅದರೆ ಪತ್ರಕರ್ತೆ ವಿಜಯಮ್ಮನವರ ಮಗ ಬಿ.ಸುರೇಶ್ ಅಂದಕೂಡಲೇ ಎಲ್ಲರಿಗೂ ಅರ್ಥವಾಗುತ್ತದೆ.

ಈ ಸುರೇಶ್ ಅಮ್ಮನಂತೆಯೇ ಬರಹದಲ್ಲಿ ಚೆನ್ನಾಗಿ ಪಳಗಿದವರು. ಪುಟ್ನಂಜ, ಸಿಪಾಯಿ ಮೊದಲಾದ ಚಿತ್ರಗಳಲ್ಲಿ ರವಿಚಂದ್ರನ್ರವರೊಂದಿಗೆ ದುಡಿದ ಬಿ.ಸುರೇಶ್, ಠಪೋರಿ ಹಾಗೂ ಅರ್ಥ ಎಂಬ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅದರಲ್ಲಿ ಅರ್ಥ ಚಿತ್ರ ಅರ್ಥಪೂರ್ಣವಾಗಿದ್ದು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಈಗ ಸುರೇಶ್ ಹೊಸ ಸಾಹಸಕ್ಕೆ ಅಡಿಯಿಟ್ಟಿದ್ದಾರೆ. ತಮ್ಮದೇ ಮೀಡಿಯಾ ಹೌಸ್ ಸ್ಟುಡಿಯೋ ವತಿಯಿಂದ ಗುಬ್ಬಚ್ಚಿ ಎಂಬ ಚಿತ್ರವನ್ನು ನಿರ್ಮಿಸಲಿರುವ ಸುರೇಶ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಅಭಯಸಿಂಹರಿಗೆ ವಹಿಸಿದ್ದಾರೆ. ಈತ ಪೂನಾದ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ನಲ್ಲಿ ಚಲನಚಿತ್ರ ನಿರ್ದೇಶನ ವಿಭಾಗದಲ್ಲಿ ಪದವಿ ಪಡೆದ ಪ್ರತಿಭಾವಂತ.

ಆಧುನಿಕ ಜೀವನದಿಂದ ನಾವು ಏನೆಲ್ಲಾ ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಸಾಂಕೇತಿಕವಾಗಿ ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಕಾಣಬರಲಿದ್ದು, ಪ್ರಮುಖ ಪಾತ್ರಗಳಲ್ಲಿ ಅನು ಪ್ರಭಾಕರ್, ರಾಜೇಶ್, ಬಾಲ ಪ್ರತಿಬೆಗಳಾದ ಪ್ರಕೃತಿ ಹಾಗೂ ಅಭಿಲಾಷ್ ಕಶ್ಯಪ್ ನಟಿಸಲಿದ್ದಾರೆ.