ಇಂದ್ರನ ಗಮ್ಮತ್ತಿನಲ್ಲಿ ದರ್ಶನ್
ಬೆಂಗಳೂರು, ಮಂಗಳವಾರ, 15 ಜನವರಿ 2008( 17:55 IST )
ಒಳ್ಳೊಳ್ಳೆಯ ಪಾತ್ರಗಳಲ್ಲಿ ನಟಿಸಬೇಕು ಎಂಬ ತುಡಿತ ಇರುವುದರ ಜೊತೆಗೆ ದ್ವಿಪಾತ್ರಾಭಿನಯವೂ ಕೆಲವರ ಆಸೆಯಾಗಿರುತ್ತದೆ. ಅಂಥಾ ಆಸೆಯನ್ನು ದರ್ಶನ್ ಇಂದ್ರ ಚಿತ್ರದ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ.
ಎ.ಕುಪ್ಪುಸ್ವಾಮಿ ಹಾಗೂ ಸುರೇಶ್ ಚೌಧರಿ ನಿರ್ಮಾಣದ ಈ ಚಿತ್ರದ ಹಾಡುಗಳ ಚಿತ್ರೀಕರಣ ಸ್ವಿಜರ್ಲ್ಯಾಂಡ್ ಹಾಗೂ ಬ್ಯಾಂಕಾಕ್‌ಗಳಲ್ಲಿ ನಡೆದಿದೆ. ಇದನ್ನು ಹೊರತುಪಡಿಸಿ ಬೆಂಗಳೂರು, ಮೈಸೂರು, ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದು ಚಿತ್ರತಂಡದ ವಿವರಣೆ.
ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯವಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಬಿ.ಎ.ಮಧು ಸಂಭಾಷಣೆ ರಚಿಸಿದ್ದಾರೆ. ನಮಿತಾ, ರಮೇಶ್ ಭಟ್, ಸತ್ಯಜಿತ್, ಬುಲೆಟ್ ಪ್ರಕಾಶ್ ಮೊದಲಾದವರ ತಾರಾಗಣವಿರುವ ಈ ಚಿತ್ರದಲ್ಲಿ ಬಹಳ ದಿನಗಳ ನಂತರ ಸಾಂಘವಿಯವರು ನಟಿಸುತ್ತಿರುವುದು ಚಿತ್ರದ ಕುರಿತಾದ ಕುತೂಹಲವನ್ನು ಹೆಚ್ಚಿಸಿದೆ.