ಗರಗಸ ಸೆನ್ಸಾರಾಯಿತು
ಬೆಂಗಳೂರು, ಮಂಗಳವಾರ, 15 ಜನವರಿ 2008( 14:02 IST )
ತಮ್ಮ ಚಿತ್ರಕ್ಕೆ ನವಿರು ಹಾಸ್ಯದ ಲೇಪವನ್ನು ಕೊಡುವುದರಲ್ಲಿ ನಿರ್ದೇಶಕ ದಿನೇಶ್‌ಬಾಬು ಸಿದ್ಧಹಸ್ತರು. ಅವರ ನಿರ್ದೇಶನದ ಸುಪ್ರಭಾತ, ಹೆಂಡ್ತಿಗ್ಹೇಳ್ಬೇಡಿ, ನಾನೇನೂ ಮಾಡ್ಲಿಲ್ಲ, ಹೆಂಡ್ತಿಗ್ಹೇಳ್ತೀನಿ, ಲಾಲಿ ಚಿತ್ರಗಳಲ್ಲಿನ ಹಾಸ್ಯ ಸನ್ನಿವೇಶಗಳನ್ನು ನೋಡಿದರೆ ದಿನೇಶ್‌ಬಾಬುರವರ ಹಾಸ್ಯಪ್ರಜ್ಞೆ ಅರಿವಿಗೆ ಬರುತ್ತದೆ.
ಈಗ ಗರಗಸ ಎಂಬ ಪರಿಪೂರ್ಣ ಹಾಸ್ಯ ಚಿತ್ರವನ್ನು ಅವರು ನಿರ್ದೇಶಿಸಿದ್ದು ಅದು ಸೆನ್ಸಾರ್‌ನವರ ಮೆಚ್ಚುಗೆಗೆ ಪಾತ್ರವಾಗಿದೆ. ಮನೆಮಂದಿಯೆಲ್ಲಾ ನೋಡಬಹುದಾದ ಹಾಸ್ಯ ಚಿತ್ರ ಎಂಬ ಟಿಪ್ಪಣಿಯೊಂದಿಗೆ ಇದಕ್ಕೆ ಯು ಪ್ರಮಾಣಪತ್ರ ಲಭಿಸಿದೆ.
ನವಿರು ಹಾಸ್ಯಕ್ಕೆ ಹೆಸರಾದ ಅನಂತ್‌ನಾಗ್ ಹಾಗೂ ಇತ್ತೀಚಿನ ಕಾಮಿಡಿ ಸೆನ್ಸೇಷನ್ ಕೋಮಲ್‌ಕುಮಾರ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆಂದ ಮೇಲೆ ಹಾಸ್ಯದ ಹೊನಲಿಗೆ ಮೋಸವಿಲ್ಲ ಎಂಬುದು ಎಲ್ಲರ ನಂಬುಗೆ. ಆ ನಂಬುಗೆ ಹುಸಿಯಾಗದಿರಲಿ.