ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಾಜ್.. ಚಿತ್ರೀಕರಣ ಸುಸೂತ್ರ
ಸುದ್ದಿ/ಗಾಸಿಪ್
Feedback Print Bookmark and Share
 
ಚಿತ್ರ ಸೇಟ್ಟೇರುವ ದಿನಗಳಲ್ಲಿ ನಾಯಕ ಪಾತ್ರಧಾರಿಗೆ ಸಂಬಂಧಪಟ್ಟಂತೆ ಕೆಲವೊಂದು ವಿವಾದಗಳಿಗೆ ಕಾರಣವಾಗಿದ್ದ ತಾಜ್‌ಮಹಲ್ ಚಿತ್ರದ ಚಿತ್ರೀಕರಣ ಸುಸೂತ್ರವಾಗಿ ಸಾಗಿದೆ.

ಮೊದಲು ಈ ಚಿತ್ರದಲ್ಲಿ ಸುನಿಲ್ ನಟಿಸಬೇಕಿತ್ತು. ಅದರೆ ಮೊದಲು ಒಪ್ಪಿ ನಂತರ ತಪ್ಪಿಸಿಕೊಂಡರು ಎಂಬುದು ನಿರ್ದೇಶಕ ಚಂದ್ರುರವರ ಆಪಾದನೆಯಾಗಿದ್ದರೆ, ನಾನು ಅದೇ ಸಮಯಕ್ಕೆ ಅಮೆರಿಕದ ಅಕ್ಕ ಸಮ್ಮೇಳನಕ್ಕೆ ಹೋಗುವುದಿತ್ತು. ಹಾಗಾಗಿ ಚಿತ್ರ ಒಪ್ಪಿಕೊಳ್ಳಲಾಗಲಿಲ್ಲ ಎಂಬುದು ಸುನೀಲ್‌ರವರ ವಿವರಣೆಯಾಗಿತ್ತು. ಒಟ್ಟಿನಲ್ಲಿ ಇವರಿಬ್ಬರ ಕೋಳಿಜಗಳದಲ್ಲಿ ಲಾಭವಾಗಿದ್ದು ನಾಯಕನಟ ಅಜಯ್‌ಗೆ.

ಮದ್ದೂರು ಬಳಿಯ ತೈಲೂರಿನಲ್ಲಿ ಚಿತ್ರದ ದೃಶ್ಯ ಹಾಗೂ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಕಥೆ-ಚಿತ್ರಕಥೆ-ಸಂಭಾಷಣೆಯೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ಚಂದ್ರುರವರ ಕಾರ್ಯವೈಖರಿ ಎಲ್ಲರಿಗೂ ಮೆಚ್ಚುಗೆಯಾಗಿದೆಯಂತೆ.

ಅಭಿಮಾನ್ ಸಂಗೀತ, ಕೆ.ಎಸ್.ಚಂದ್ರಶೇಖರ್ರವರ ಛಾಯಾಗ್ರಾಹಣವಿರುವ ಈ ಚಿತ್ರಕ್ಕೆ ಹೊಸಮನೆ ಮೂರ್ತಿಯವರ ಕಲೆಯಿದೆ. ಮಳೆ ಹುಡುಗಿ ಪೂಜಾಗಾಂಧಿ ನಾಯಕಿ. ಇತರ ಪಾತ್ರಗಳಲ್ಲಿ ಅನಂತ್‌ನಾಗ್, ರಂಗಾಯಣ ರಘು, ಪದ್ಮಜಾರಾವ್, ಕಿಶೋರಿ ಬಲ್ಲಾಳ್ ಮೊದಲಾದವರಿದ್ದಾರೆ.