' ಯುವ' ದಲ್ಲಿ ಮುಳುಗಿರುವ ಯುವ ನಿರ್ದೇಶಕ: ನರೇಂದ್ರಬಾಬು
ಬೆಂಗಳೂರು, ಬುಧವಾರ, 16 ಜನವರಿ 2008( 15:10 IST )
ಕನ್ನಡ ಚಿತ್ರರಂಗದಲ್ಲಿ ನರೇಂದ್ರಬಾಬು ಎಂದರೆ ಕೊಂಚ ಕನ್ಫ್ಯೂಸ್ ಆಗುವವರುಂಟು. ಕಾರಣ ಇಲ್ಲಿ ನಟ ನರೇಂದ್ರಬಾಬು ಇದ್ದಾರೆ, ಗೀತರಚನೆಕಾರ-ನಿರ್ದೇಶಕ ನರೇಂದ್ರಬಾಬು ಇದ್ದಾರೆ. ಆದರೆ ನಾವೀಗ ಹೇಳಹೊರಟಿರುವುದು ಪಲ್ಲಕ್ಕಿ ನಿರ್ದೇಶಿಸಿದ ನರೇಂದ್ರಬಾಬು ಕುರಿತು. ಅವರೀಗ ಯುವ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ.
ಯುವ ಚಿತ್ರಕ್ಕಾಗಿ ರಾಮನಗರದ ಬಂಡೆಗಳ ಮೇಲೆ ನರೇಂದ್ರಬಾಬು ಚಿತ್ರೀಕರಣ ನಡೆಸುತ್ತಿದ್ದು, ಅಲ್ಲಿ ನಡೆಯುತ್ತಿದ್ದ ಹೊಡೆದಾಟದ ದೃಶ್ಯಗಳು ದಶಕಗಳ ಹಿಂದೆ ನಡೆದ ಷೋಲೆ ಚಿತ್ರದ ಚಿತ್ರೀಕರಣವನ್ನು ನೆನಪಿಸುವಂತಿದ್ದವು. ಅಂದು ನಡೆಯುತ್ತಿದ್ದ ಹೊಡೆದಾಟದ ದೃಶ್ಯ ಚಿತ್ರದಲ್ಲಿ ಕೇವಲ ಮೂರು ನಿಮಿಷಗಳವರೆಗೆ ಇರುತ್ತದಾದರೂ ಆ ದೃಶ್ಯಕ್ಕಾಗಿ 20ಲಕ್ಷ ವೆಚ್ಚದ ಸೆಟ್ ಹಾಕಿಸಿದ್ದು ನಿರ್ಮಾಪಕರ ಸಾಹಸಕ್ಕೆ ಸಾಕ್ಷಿಯಾಗಿತ್ತು.
ಈ ದೃಶ್ಯದ ಸಾಹಸ ಸಂಯೋಜನೆಯನ್ನು ಯಜ್ಞಶೆಟ್ಟಿಯವರು ಮಾಡಿದ್ದು ನಾಯಕ ಕಾರ್ತಿಕ್ ಇದಕ್ಕೆಂದೇ ತರಬೇತಿ ಪಡೆದಿದ್ದಾರಂತೆ. ರಮೇಶ್‌ಭಟ್ ನಾಯಕನ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದ್ದು ನಿರ್ದೇಶಕರಿಂದ.