ನಂದ ಲವ್ಸ್ ನಂದಿತಾ ಕ್ಯಾಸೆಟ್ ಬಿಡುಗಡೆ
ಬೆಂಗಳೂರು, ಬುಧವಾರ, 16 ಜನವರಿ 2008( 15:12 IST )
ದುನಿಯಾ ಚಿತ್ರದಿಂದ ಪ್ರಸಿದ್ದಿ ಪಡೆದವರಲ್ಲಿ ಸೂರಿ, ವಿಜಯ್, ರಶ್ಮಿ, ರಂಗಾಯಣ ರಘು ಪ್ರಮುಖರು.
ಲೂಸ್ ಮಾದ ಪಾತ್ರದಲ್ಲಿ ನಟಿಸಿದ್ದ ಯೋಗೀಶ್ ಈಗ ಆ ಹೆಸರಿಗೆ ಮತ್ತೊಂದು ಸೇರ್ಪಡೆ. ಯೋಗೀಶ್ ನಾಯಕನಾಗಿ ನಟಿಸಿರುವ ನಂದ ಲವ್ಸ್ ನಂದಿತ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕೆ.ಸಿ.ಎನ್.ಚಂದ್ರಶೇಖರ್ ಹಾಗೂ ನಟ ದರ್ಶನ್ ಬಿಡುಗಡೆ ಕಾರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕ ಸಿದ್ಧರಾಜು ಮಾತನಾಡುತ್ತಾ, ದುನಿಯಾ ಚಿತ್ರದ ಆಡಿಯೋ ಕ್ಯಾಸೆಟ್ ವ್ಯವಹಾರದಲ್ಲಿ ಮೋಸಹೋಗಿದ್ದು ಇನ್ನೂ ನೆನಪಲ್ಲಿದೆ. ಮತ್ತೆ ಹಾಗಾಗದಿರಲಿ ಎಂದು ತಮ್ಮ ಮಗನ ನೇತೃತ್ವದ ಅಕ್ಷಯ್ ಆಡಿಯೋ ಮೂಲಕ ಮಾರುಕಟ್ಟೆಗೆ ಕ್ಯಾಸೆಟ್ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ನಿರ್ದೇಶಕ ವಿಜಯ್‌ಕುಮಾರ್, ನಿರ್ಮಾಪಕ ರಮೇಶ್ ಕಶ್ಯಪ್, ಯೋಗೀಶ್, ಶ್ವೇತ, ಕಥೆಗಾರ ಅಜಯ್‌ಕುಮಾರ್ ಮೊದಲಾದವರು ಹಾಜರಿದ್ದರು.