ಕೋಮಲ್ ನಾಯಕ, ಸಿಹಿಕಹಿ ಚಂದ್ರು ನಿರ್ಧೆಶಕ
ಬೆಂಗಳೂರು, ಬುಧವಾರ, 16 ಜನವರಿ 2008( 15:15 IST )
ಹಾಸ್ಯ ಪಾತ್ರಗಳ ನಿರ್ವಹಣೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಕೋಮಲ್ ಈಗ ಮತ್ತೊಮ್ಮೆ ನಾಯಕ ಪಾತ್ರಗಳಲ್ಲಿ ಒಂದು ಕೈ ನೋಡಲು ಬಯಸಿದ್ದಾರೆ. ಈ ಹಿಂದೆ ಮಿಲ್ಟ್ತ್ರಿಮಾವ ಎಂಬ ಚಿತ್ರದಲ್ಲಿ ಅವರು ನಾಯಕರಾಗಿ ನಟಿಸಿದ್ದರೂ ಅದು ಅಷ್ಟೊಂದು ಯಶಸ್ವಿಯಾಗಿರಲಿಲ್ಲ.
ಕೋಮಲ್ ನಾಯಕರಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನವನ್ನು ಸಿಹಿಕಹಿ ಚಂದ್ರು ವಹಿಸಲಿರುವುದು ಮತ್ತೊಂದು ವಿಶೇಷ. ಪಾಪ ಪಾಂಡು, ಸಿಲ್ಲಿ ಲಲ್ಲಿ, ಪಾಂಡು ಐ ಲವ್ ಯೂ ಹಾಸ್ಯ ಧಾರಾವಾಹಿಗಳ ನಿರ್ವಹಣೆ ಮತ್ತು ಯಶಸ್ಸು ಅವರ ಬೆನ್ನಿಗಿದೆ. ಹೀಗಾಗಿ ಚಿತ್ರ ನಿರ್ದೇಶನ ಅವರಿಗೆ ಅಷ್ಟು ಕಷ್ಟವಾಗಲಾರದು ಎಂಬುದು ಚಂದ್ರುವನ್ನು ಹತ್ತಿರದಿಂದ ಬಲ್ಲವರ ಅಭಿಮತ.
ಚಿತ್ರದ ಕಥೆ ಸಿದ್ಧವಾಗಿದ್ದರೂ ಅದಕ್ಕೆ ತಕ್ಕ ಟೈಟಲ್ ಇನ್ನೂ ಸಿಕ್ಕಿಲ್ಲ. ಕ್ಯಾಚಿಯಾಗಿರುವ ಟೈಟಲ್ ತಲಾಶೆಯಲ್ಲಿದ್ದಾರೆ ಚಂದ್ರು. ನಿಮಗೇನಾದರೂ ಸಿಕ್ಕರೆ ಚಂದ್ರುಗೆ ಫೋನ್ ಮಾಡಲು ಮರೀಬೇಡಿ!!