ಸಿಹಿಕಹಿ ಗೀತಾ ನಿರ್ದೇಶನದಲ್ಲಿ ಪಾಯಿಂಟ್ ಪರಿಮಳ
ಬೆಂಗಳೂರು, ಬುಧವಾರ, 16 ಜನವರಿ 2008( 15:16 IST )
ಮಂಜುಳಾ ನಾಯಕಿಯಾಗಿ ನಟಿಸಿದ್ದ ಪಾಯಿಂಟ್ ಪರಿಮಳ ಅಂದಿಗೆ ಹೆಸರುವಾಸಿಯಾಗಿತ್ತು. ಈಗ ಆ ಹೆಸರು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಆದರೆ ಚಿತ್ರವಾಗಿ ಅಲ್ಲ, ಕಿರುತೆರೆ ಧಾರಾವಾಹಿಯಾಗಿ. ಸಿಹಿಕಹಿ ಗೀತಾ ಪಾಯಿಂಟ್ ಪರಿಮಳಾ ಧಾರಾವಾಹಿಯ ನಿರ್ದೇಶಕರಾಗಿ ಹೊಸ ಅವತಾರವನ್ನೆತ್ತಲಿದ್ದಾರೆ.
ತಮ್ಮ ಪತಿ ಚಂದ್ರುರವರ ಧಾರಾವಾಹಿಗಳಿಗೆ ಬೆನ್ನೆಲುಬಾಗಿದ್ದ ಗೀತಾ ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವವನ್ನೂ ಪಡೆದುಕೊಂಡಿದ್ದಾರೆ. ಈಗ ಎಸ್.ಕೆ.ವಿಷನ್ಸ್ ಲಾಂಛನದಲ್ಲಿ ಈ ಧಾರಾವಾಹಿಯ ನಿರ್ಮಾಣ-ನಿರ್ದೇಶನ ನಡೆಯುತ್ತಿದ್ದು ಇದು ಪಕ್ಕಾ ಹಾಸ್ಯದ ಕಥೆಯನ್ನು ಹೂರಣವನ್ನಾಗಿಸಿಕೊಂಡಿದೆ.
ಈ ಹಿಂದೆ ಫೈನಲ್‌ಕಟ್ ಪ್ರೊಡಕ್ಷನ್ಸ್ರವರ ಅಥವಾ ಸಿಹಿಕಹಿ ಚಂದ್ರುರವರ ನಿರ್ಮಾಣದ ಧಾರಾವಾಹಿಗಳು ಈ-ಟಿವಿಯಲ್ಲಿ ಪ್ರಸಾರಗೊಳ್ಳುತ್ತಿದ್ದವು. ಈಗ ಪಾಯಿಂಟ್ ಪರಿಮಳ ಕಸ್ತೂರಿ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ ಎಂದು ತಿಳಿದುಬಂದಿದೆ.