ಪ್ರಥಮ ಹಂತದ ಪಯಣ ಮುಗಿಸಿದ ವಿಠ್ಠಲ್‌ರಾವ್
ಬೆಂಗಳೂರು, ಗುರುವಾರ, 17 ಜನವರಿ 2008( 11:42 IST )
ಕಲಾವಿದ ರವಿಶಂಕರ್ ಎಂದರೆ ಕೆಲವರಿಗೆ ಅರ್ಥವಾಗುವುದಿಲ್ಲ. ಆದರೆ ಡಾ|ವಿಠ್ಠಲ್‌ರಾವ್ ಎಂದರೆ ಎಲ್ಲರೂ ಮನಸಾರೆ ನಕ್ಕು ಗೊತ್ತು ಗೊತ್ತು ಎಂದು ಉದ್ಗರಿಸುತ್ತಾರೆ. ಇಂಥಾ ಪ್ರಶಂಸೆಗೆ ಪಾತ್ರರಾಗಿರುವ ರವಿಶಂಕರ್ ತಮ್ಮ ಚಿತ್ರಜೀವನದ ಪಯಣಕ್ಕೆ ನಾಂದಿಹಾಡ ಹೊರಟಿರುವುದು ಪಯಣ ಎಂಬ ಚಿತ್ರದ ಮೂಲಕ.
ಇದರಲ್ಲಿ ಅವರದು ಟ್ಯಾಕ್ಸಿ ಚಾಲಕನ ಪಾತ್ರ. ಅವನ ಪ್ರಯಾಣ ಮತ್ತು ಪ್ರಣಯದ ಸುತ್ತ ಕಥೆ ತಿರುಗುತ್ತದೆ ಎಂಬುದು ನಿರ್ದೇಶಕ ಕಿರಣ್ ಗೋವಿಯವರ ಹೇಳಿಕೆ. ಕಥೆ-ಚಿತ್ರಕಥೆಯೂ ಅವರದ್ದೇ ಅನ್ನಿ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮಡಿಕೇರಿ, ಕುಶಾಲ ನಗರ, ಬೆಂಗಳೂರು ಹಾಗೂ ಮೈಸೂರು ಸುತ್ತ ಮುತ್ತ ನಡೆದಿದೆ.
ರವಿಶಂಕರ್‌ಗೆ ಈ ಚಿತ್ರದಲ್ಲಿ ನಾಯಕಿಯಾಗಿರುವವರು ಪಲ್ಲಕ್ಕಿ ಚಿತ್ರದಲ್ಲಿ ನಟಿಸಿದ್ದ ಪಂಜಾಬಿ ಚೆಲುವೆ ರಮಣೀತು ಚೌಧರಿ. ರಂಗಾಯಣ ರಘು, ನಂದಾ, ಕವಿತಾ, ಬುಲೆಟ್ ಪ್ರಕಾಶ್ ಮೊದಲಾದವರು ಇತರ ತಾರಾಗಣದಲ್ಲಿದ್ದು ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.