ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎಸ್.ವಿ.ಬಾಬು ತೆಕ್ಕೆಗೆ ಗೋಲ್ಡನ್‌ ಸ್ಟಾರ್ ಗಣೇಶ್
ಸುದ್ದಿ/ಗಾಸಿಪ್
Feedback Print Bookmark and Share
 
ಸಹೃದಯಿ ನಿರ್ಮಾಪಕ ಎಂದೇ ಹೆಸರಾದ ಎಸ್.ವಿ.ಬಾಬುರವರಿಗೆ ಕಳೆದ ವರ್ಷ ಅದೃಷ್ಟ ಏಕೋ ಏನೋ ಕೈಕೊಟ್ಟಿತ್ತು. ಅವರಿಗೆ ಈಗ ಗೋಲ್ಡನ್ ಸ್ಟಾರ್ ಗಣೇಶ್ ಕಾಲ್‌ಶೀಟ್ ಸಿಕ್ಕಿದ್ದು, ಸವಿ ಸವಿ ನೆನಪು ಚಿತ್ರದ ಕಹಿ ಕಹಿ ನೆನಪುಗಳು ಸದ್ಯದಲ್ಲಿಯೇ ದೂರವಾಗಲಿವೆ ಎಂದು ಹೇಳುತ್ತಿವೆ ಕೆಲವೊಂದು ಮೂಲಗಳು.

ಸಂತೋಷ ರೈ ಪಾತಾಜೆಯವರ ನಿರ್ದೇಶನದಲ್ಲಿ, ಪ್ರೇಮ್ ನಾಯಕತ್ವದಲ್ಲಿ ಸವಿ ಸವಿ ನೆನಪು ಚಿತ್ರವನ್ನು ನಿರ್ಮಿಸಿದ ಎಸ್.ವಿ.ಬಾಬು ತಮ್ಮ ಮಹತ್ವಾಕಾಂಕ್ಷೆಯ ಅನುಸಾರ ಯಶಸ್ಸು ಸಾಧಿಸಲಾಗಲಿಲ್ಲ. ತೆಲುಗಿನಲ್ಲೂ ಒಂದು ಕೈ ನೋಡಿದರೂ ಅಲ್ಲೂ ಗಿಟ್ಟಲಿಲ್ಲ. ಈಗ ಗಣೇಶ್ ಕಾಲ್‌ಶೀಟ್ ದೊರೆತಿರುವುದು ಅವರನ್ನು ಕನ್ನಡದ ಮನೆಗೆ ಮರಳುವಂತೆ ಮಾಡಿದೆ.

ಮುಂಗಾರು ಮಳೆಯಿಂದ ಆರಂಭವಾದ ಗಣೇಶ್ ಗ್ರಾಫ್ ವರ್ಷಾಂತ್ಯದವರೆಗೂ ಏರುತ್ತಲೇ ಇತ್ತು. ಎಲ್ಲಾ ಸೂಪರ್‌ಹಿಟ್ ಚಿತ್ರಗಳೇ. ಈ ಹಿನ್ನೆಲೆಯಲ್ಲಿ ಅವರ ಚಿತ್ರಗಳ ಕುರಿತು ಯಾರಿಗಾದರೂ ಕುತೂಹಲ ಸಹಜವೇ. ಮುಂದಿನ ತಿಂಗಳು ಚಿತ್ರ ಸೆಟ್ಟೇರಲಿದೆ ಎಂಬುದು ಸದ್ಯಕ್ಕೆ ಸಿಕ್ಕಿರುವ ಸುದ್ದಿ.