ಮಯೂರ ಹೋಯ್ತು ವಂಶಿ ಬಂತು ಡುಂ ಡುಂ!
ಬೆಂಗಳೂರು, ಗುರುವಾರ, 17 ಜನವರಿ 2008( 12:43 IST )
ಪುನೀತ್ ಅಭಿನಯದ ಮಯೂರ ಚಿತ್ರವನ್ನು ನಿರ್ದೇಶಿಸಬೇಕಿದ್ದ ತೆಲುಗು ನಿರ್ದೇಶಕ ಶೋಭನ್‌ರವರು ಹೃದಯಾಘಾತದಿಂದ ಅಸು ನೀಗಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಆ ಚಿತ್ರವನ್ನು ಮಹೇಶ್‌ಬಾಬು ನಿರ್ದೇಶಿಸುವ ಸಾಧ್ಯತೆಗಳಿವೆ; ಇದಕ್ಕೆ ಸಂಬಂಧಿಸಿ ಕರೆ ಬಂದರೆ ಮಹೇಶ್ ಬಾಬು ಈ ಕುರಿತು ಚರ್ಚಿಸಲಿದ್ದಾರೆ ಎಂಬ ಸುದ್ದಿಗಳು ಇದುವರೆಗೂ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದವು.
ಆದರೆ ಇತ್ತೀಚೆಗಷ್ಟೇ ಹೊರಬಿದ್ದಿರುವ ಸುದ್ದಿ ಮತ್ತೊಂದು ಕಥೆಯನ್ನು ಹೇಳಿದೆ. ಅದರ ಅನುಸಾರ, ಮಯೂರ ಚಿತ್ರದ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಅದರ ಬದಲು ಮಿಲನ ನಿರ್ದೇಶಕ ಪ್ರಕಾಶ್ ಹಾಗೂ ಪುನೀತ್ ಮತ್ತೆ ಸೇರಲಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ನಿರ್ಮಿಸಲಿರುವ ಈ ಚಿತ್ರಕ್ಕೆ ವಂಶಿ ಎಂದು ಹೆಸರಿಡಲಾಗಿದ್ದು, ಇದರಿಂದ ಪ್ರಕಾಶ್ ಬಂಪರ್ ಹೊಡೆದಂತಾಗಿದೆ. ಪುನೀತ್‌ರನ್ನು ಹೊರತು ಪಡಿಸಿ ಚಿತ್ರದ ತಾರಾಗಣವಿನ್ನೂ ಆಖೈರಾಗಿಲ್ಲ. ಕೆಲವೇ ದಿನಗಳಲ್ಲಿ ಚುರುಕಾಗಿ ಈ ಚಿತ್ರವನ್ನು ಹೊರತರುವುದು ನಿರ್ಮಾಪಕರ ಉದ್ದೇಶ ಎಂದು ತಿಳಿದುಬಂದಿದೆ.