ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಷ್ಟೊಂದು ದುಡ್ಡಾ? ಛೇ ಛೇ ಇಲ್ಲಪ್ಪಾ.....!!
ಸುದ್ದಿ/ಗಾಸಿಪ್
Feedback Print Bookmark and Share
 
ರಾಜಕೀಯ ಮತ್ತು ಚಿತ್ರರಂಗ ಒಂದೇ ನಾಣ್ಯದ ಎರಡು ಮುಖಗಳು, ಇಬ್ರನ್ನೂ ನಂಬೋದು ಕಷ್ಟ. ಅವ್ರ್ರು ವಿನಾಕಾರಣ ಆಶ್ವಾಸನೆ ಕೊಟ್ರೆ ಇವ್ರು ವಿನಾಕಾರಣ ಸುಳ್ಳು ಹೇಳ್ತಾರೆ ಎನ್ನುವವರಿದ್ದಾರೆ. ಒಂದರ್ಥದಲ್ಲಿ ಇದು ನಿಜವೂ ಹೌದು.

ಟು ಬಿ ವೆರಿ ಮಚ್ ಫ್ರಾಂಕ್ ವಿತ್ ಯೂ...... ಏನಾತಪಾ ಅಂದ್ರೇ, ಪ್ರೀತಿ ಏಕೆ ಭೂಮಿ ಮೇಲಿದೆ ಅನ್ನೋ ಚಿತ್ರಾನಾ ಪ್ರೇಮ್ ತೆಗೆದ್ರಾ? ತೆಗೀತಾ ತೆಗೀತಾ ಚಿತ್ರದ ಬಜೆಟ್ಟು 7 ಕೋಟಿ ಮುಟ್ತಂತೆ. ಜೊತೆಗೆ ಪಿಚ್ಚರ್ರು ಮುಗಿಯೋಗಂಟಾ ಒಂದಲ್ಲಾ ಒಂದು ತರಲೆ ತಾಪತ್ರಯ. ಹಂಗೂ ಹಿಂಗೂ ಮಾಡಿ ರೀಲೀಸು ಮಾಡಿದ್ರೆ ಯಾಕೋ ಗಂಟಿಗೇ ಸಂಚಕಾರ ಬರೋ ಹಂಗೆ ಕಾಣಿಸ್ತಂತೆ.

ನಮ್ ಕಿಲಾಡಿ ರಾಮ್‌ ಪ್ರಸಾದು ಸುಮ್ನೇ ಬಿಟ್ಟಾರಾ? ಬಂದಷ್ಟು ಬರ್ಲಿ ಗೆಬರ್ಕಳಾವಾ ಅಂತ ಚಿತ್ರದ ಸೆಟಲೈಟ್ ರೈಟ್ಸು, ಮತ್ತೊಂದು ಮಗದೊಂದು ಎಲ್ಲಾದ್ನೂ ಮಾರ್ಕಂಡ್ರೆ ಹೆಂಗೆ ಅಂತ ಅವ್ರು ಯೋಚ್ನೆ ಮಾಡಿದ್ರಂತೆ. ಮಾರಿದಂಗೂ ಇರಬೇಕು, ಅವಮಾನಾನೂ ಆಗ್ಬಾರ್ದು ಅನ್ನೋ ಯೋಚ್ನೆ ಬಂದಿದ್ದೇ ತಡ, ಚಿತ್ರಾನಾ ಜೀ ಟೀವಿ 1 ಕೋಟಿ 8 ಲಕ್ಷಕ್ಕೆ ತಕ್ಕಂಡಿದೆ ಅಂತ ಅಂದುಬಿಟ್ರು. ಚಿತ್ರ ತುಂಬಾ ಚೆನ್ನಾಗೈತೆ ಅಂತ ಹೇಳ್ಕಳ್ಳಕ್ಕೆ ಇದು ಮತ್ತೊಂದು ದಾರಿ ಅಂತ ಹೇಳ್ಬೇಕೇ? ಅಬ್ಬಾ ಅಷ್ಟೊಂದು ದುಡ್ಡಾ? ಅಂತ ಕೆಲವರು ಮೂಗಿನ ಮೇಲೆ ಬೆರಳ್ ಇಟ್ಕಂಡಿದ್ದೂ ಆಯ್ತು ಅನ್ನಿ.

ಆದ್ರೇನಾಯ್ತೂ??!! ಜೀ ಟೀವಿಯವ್ರು ಒಂದು ಪ್ರಕಟಣೆ ನೀಡಿ, ನಾವು ಚಿತ್ರ ತಕ್ಕಂಡಿರಾದು ನಿಜಾ. ಆದ್ರೆ ಇವ್ರು ಹೇಳ್ಕಂಡಂಗೆ ಕೋಟಿ ದುಡ್ಡು ಕೊಟ್ಟಿಲ್ಲ ಕಣ್ರಪೋ. ಅದಕ್ಕೆ ಎಷ್ಟು ಕೊಡ್ಬೋದೋ ಅಷ್ಟು ಮಾತ್ರಾ ಕೊಟ್ಟೀವಿ ಅಂತ ಪೇಪರ್‌ನಾಗೆ ಹೇಳ್ಕಂಡವ್ರೆ.

ಸುಳ್ಳೇ ಸುಳ್ಳೂ... ಈ ಭೂಮಿ ಮ್ಯಾಗೆ ಎಲ್ಲಾ ಸುಳ್ಳೂ.. ಅಂತ ಪ್ರೇಮ್ ಹಾಡು ಬರ್ದಿದ್ದು ಇದಕ್ಕೇನಾ? ಯಾರದ್ದು ಸುಳ್ಳೂ??!! ಅನ್ನೋದೇ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲೂ ಹಬ್ಬಿರುವ ಗಾಸಿಪ್ಪು!!