ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಡಿಕೇರಿಯಲ್ಲಿ ದೀನಗಾನ
ಸುದ್ದಿ/ಗಾಸಿಪ್
Feedback Print Bookmark and Share
 
ಶಿಷ್ಯ ಚಿತ್ರ ಹೊರಬಂದಾಗ ಚಿತ್ರರಸಿಕರು ಅದರ ನಾಯಕ ದೀಪಕ್‌ನಲ್ಲಿ ಶಂಕರ್‌ನಾಗ್‌ರವರನ್ನು ಕಂಡರು. ಶಂಕರ್‌ನಾಗ್ ಅವರ ಬಾಡಿ ಲಾಂಗ್ವೇಜ್ ದೀಪಕ್‌ನಲ್ಲಿದೆ ಎಂಬುದೇ ಈ ಅಭಿಮಾನಕ್ಕೆ ಕಾರಣ.

ಈಗ ದೀಪಕ್ ದೀನ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು ಅದರ ಹಾಡಿನ ಚಿತ್ರೀಕರಣ ಮಡಿಕೇರಿಯ ರಮ್ಯತಾಣಗಳಲ್ಲಿ ನಡೆಯುತ್ತಿದೆ. ಏ ಹುಡುಗ ಲೋ ಹುಡುಗ ನೀ ನನ್ನ ಪ್ರಾಣ ಕಣೋ.. ಎಂಬ ಹಾಡಿಗೆ ನಾಯಕಿ ಸ್ಮಿತಾರೊಂದಿಗೆ ದೀಪಕ್ ಹೆಜ್ಜೆ ಹಾಕುವಾಗ ಅವರಿಗೆ ನೃತ್ಯ ನಿರ್ದೇಶನ ನೀಡಿದ್ದು ಹರ್ಷ.

ಲಕ್ಷ್ಮೀ ಸಿನಿ ಕಂಬೈನ್ಸ್ ಲಾಂಛನದಲ್ಲಿ ಮೈಕೋ ನಾಗರಾಜ್ ಅರ್ಪಿಸಿ, ಸಹನಾ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುಂದರ್‌ನಾಥ್ ಸುವರ್ಣರ ಛಾಯಾಗ್ರಹಣವಿದೆ. ಅರ್ಜುನ್ ಸಂಗೀತ, ಡಿಫರೆಂಟ್ ಡ್ಯಾನಿ ಸಾಹಸ, ಆನಂದ್‌ರವರ ಸಂಭಾಷಣೆ ಈ ಚಿತ್ರದ ವಿಶೇಷತೆಗಳು.

ಚಿತ್ರದ ಇತರ ಪಾತ್ರಗಳಲ್ಲಿ ರಮೇಶ್‌ಭಟ್, ಮೈಕೋ ನಾಗರಾಜ್, ಮಂಡ್ಯ ರಮೇಶ್, ಪದ್ಮಾ ವಾಸಂತಿ, ಕರಿ ಬಸವಯ್ಯ, ಕಿಲ್ಲರ್ ವೆಂಕಟೇಶ್ ಮೊದಲಾದವರಿದ್ದಾರೆ.