ಮಾತಿನ ಮನೆಯಲ್ಲಿ ಚನ್ನ
ಬೆಂಗಳೂರು, ಶುಕ್ರವಾರ, 18 ಜನವರಿ 2008( 17:39 IST )
ಹಳ್ಳಿ ಗಮಾರ ಪಟ್ಟಣಕ್ಕೆ ಬಂದು ಅಲ್ಲಿನ ಅಡತಡೆಗಳನ್ನೆಲ್ಲಾ ಎದುರಿಸಿ ಜಯಶಾಲಿಯಾಗುವ ಕಥೆಯಿರುವ ಚಿತ್ರಗಳು ಬೋರೇಗೌಡ ಬೆಂಗಳೂರಿಗೆ ಬಂದ ಚಿತ್ರದ ಕಾಲದಿಂದಲೂ ಇವೆ. ಅಮಾಯಕತೆಗೆ ಕೊಂಚ ಹಾಸ್ಯ ಲೇಪನ ಮಾಡಲು ಇಂಥ ಕಥೆಗಳಲ್ಲಿ ಅವಕಾಶವಿರುತ್ತದೆಯಾದ್ದರಿಂದ ಇವು ಅಮರ ಕಥೆಗಳೆಂದೇ ಹೇಳಬಹುದು.
ಈಗ ಈ ವಿಷಯ ಯಾಕೆ ಬಂತಪಾ ಅಂದ್ರೆ, ಶಿಷ್ಯ ಖ್ಯಾತಿಯ ದೀಪಕ್ ಇಂಥದೇ ಕಥೆಯಿರುವ ಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರೆತಿದೆ. ಚನ್ನ ಎಂಬ ಹೆಸರಿನ ಈ ಚಿತ್ರವನ್ನು ಸಂಪತ್‌ಕುಮಾರ್ ನಿರ್ಮಿಸುತ್ತಿದ್ದು ಅವಳೇ ನನ್ನ ಹೆಂಡ್ತಿ ಚಿತ್ರದ ಖ್ಯಾತಿಯ ಎಸ್.ಉಮೇಶ್‌ರವರು ಚಿತ್ರಕಥೆ ಬರೆದು ಇದನ್ನು ನಿರ್ದೇಶಿಸುತ್ತಿದ್ದಾರೆ.
ಚಿತ್ರದ ಡಬ್ಬಿಂಗ್ ಕಾರ್ಯವೆಲ್ಲಾ ಮುಗಿದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಜೆ.ಜಿ.ಕೃಷ್ಣರ ಛಾಯಾಗ್ರಾಹಣ, ವೆಂಕಟ್ ನಾರಾಯಣ್ ಸಂಗೀತವಿರುವ ಈ ಚಿತ್ರದ ಇತರ ತಾರಾಗಣದಲ್ಲಿ ಸತ್ಯಪ್ರಿಯಾ, ಪದ್ಮಾವಾಸಂತಿ, ಕೋಟೆ ಪ್ರಭಾಕರ್, ರಾಜ್ ಬಹದ್ದೂರ್ ಮೊದಲಾದವರಿದ್ದಾರೆ.