ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಂತಿಮ ಹಂತಕ್ಕೆ ನೀನೊಲಿದ ಕ್ಷಣದಿಂದ
ಸುದ್ದಿ/ಗಾಸಿಪ್
Feedback Print Bookmark and Share
 
ಚಿತ್ರ ನಿರ್ಮಾಣದ ಸಾಧ್ಯತೆಗಳು ಹೆಚ್ಚಿದಂತೆ ವಿಭಿನ್ನ ಸರ್ಕಸ್ ಮಾಡಿ ಜನರನ್ನು ಸೆಳೆಯುವ ತಂತ್ರಗಳೂ ಹೆಚ್ಚಾಗುತ್ತಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ನೀನೊಲಿದ ಕ್ಷಣದಿಂದ ಚಿತ್ರ.

ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ನಿಷ್ಕರ್ಷ ಚಿತ್ರ ನಿರ್ದೇಶಿಸಿದಾಗ ಬೆಂಗಳೂರಿನ ಮಣಿಪಾಲ್ ಸೆಂಟರ್ ಚಿತ್ರದ ಹೀರೋ ಆಗಿತ್ತು. ಕಾರಣ ಇದೊಂದೇ ಸ್ಥಳದಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ನಡೆದಿತ್ತು. ಇದಲ್ಲದೇ ಒಂದೇ ದಿನದಲ್ಲಿ ಚಿತ್ರೀಕರಣ ಮುಗಿಸಿ ಸುದ್ದಿ ಮಾಡಿದ ಚಿತ್ರಗಳೂ ಇವೆ. ಇತ್ತೀಚೆಗಷ್ಟೇ ಆಪರೇಷನ್ ಅಂಕುಶ ಎಂಬ ಚಿತ್ರವನ್ನು 180 ಡಿಗ್ರಿಯ ಒಂದೇ ಕೋನದಲ್ಲಿ(ಕ್ರೇನ್ ಶಾಟ್ ಇಲ್ಲ, ಟ್ರಾಲಿ ಶಾಟ್ ಇಲ್ಲ) ಚಿತ್ರೀಕರಿಸಿ ಸುದ್ದಿ ಮಾಡಲಾಗಿತ್ತು.

ಇದಕ್ಕಿಂತ ವಿಭಿನ್ನವಾಗಿರುವುದು ನೀನೊಲಿದ ಕ್ಷಣದಿಂದ ಚಿತ್ರ. ಒಂದು ಬಸ್ಸಿನ ಪ್ರಯಾಣದಲ್ಲಿಯೇ ನಡೆಯುವ ಪ್ರೇಮಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಈಗಾಗಲೇ ಒಂದಷ್ಟು ಚಿತ್ರೀಕರಣ ನಡೆದಿದ್ದು, ನಂದಿಬೆಟ್ಟದ ಸಮೀಪ ಅಂತಿಮ ಹಂತದ ಚಿತ್ರೀಕರಣ ನಡೆಸುವುದು ಚಿತ್ರತಂಡದ ಉದ್ದೇಶ.

ಜಯಪಾಲ್ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕರು ಆಶಿಕ್. ಕಥೆ-ಚಿತ್ರಕಥೆಯೂ ಅವರದೇ. ಸುಧೀರ್, ಪ್ರತಾಪ್, ಜೈಜಗದೀಶ್, ಮುನಿರಾಜ್ ಮುಂತಾದವರ ತಾರಾಗಣವಿರುವ ಈ ಚಿತ್ರದ ಛಾಯಾಗ್ರಾಹಕರು ಎ.ಸಿ.ಮಹೇಂದ್ರನ್.