ಗೂಳಿ ಮುಂದಿನ ತಿಂಗಳು ಚಿತ್ರಮಂದಿರಕ್ಕೆ ದಾಳಿ
ಬೆಂಗಳೂರು, ಶನಿವಾರ, 19 ಜನವರಿ 2008( 16:14 IST )
ತಮ್ಮ ಮಹತ್ವಾಕಾಂಕ್ಷೆಯ ಶಾಂತಿನಿವಾಸ ಚಿತ್ರದ ವೈಫಲ್ಯದ ನಂತರ ನಟ ಸುದೀಪ್ ಈಗ ಯಶಸ್ಸಿನ ಹುಡುಕಾಟದಲ್ಲಿದ್ದಾರೆ. ಒಂದು ಸದಭಿರುಚಿಯ ಚಿತ್ರವು ಸೋತನಂತರ ಯಾವುದೇ ಚಿತ್ರ ಪ್ರಭೃತಿಗೆ ಉಂಟಾಗುವ ಗೊಂದಲವೇ ಸುದೀಪ್‌ಗೆ ಆದಂತಿದೆ. ಆದರೆ ಸೋಲು-ಗೆಲುವು ಎಲ್ಲಾ ಕಾಮನ್ ಅಲ್ಲವೇ?
ರಾಮು ಎಂಟರ್ಪ್ರೈಸಸ್ ಮೂಲಕ ನಿರ್ಮಾಪಕ ರಾಮು ನಿರ್ಮಿಸಿರುವ ಗೂಳಿ ಚಿತ್ರ ಜನಮೆಚ್ಚುಗೆಗೆ ಪಾತ್ರವಾಗುವ ಎಲ್ಲ ಅಂಶಗಳನ್ನು ಹೊಂದಿದೆ ಎಂಬ ಸುದ್ದಿ ಈಗಾಗಲೇ ಹಬ್ಬಿದ್ದು ಆಕರ್ಷಕವಾಗಿರುವ ಚಿತ್ರದ ಪ್ರಮೋಗಳೂ ಇದನ್ನು ಸಾಬೀತುಪಡಿಸುವಂತಿವೆ.
ಹೊಡಿ-ಬಡಿ-ಕಡಿ ಚಿತ್ರಗಳ ನಿರ್ದೇಶನದಲ್ಲಿ ನಿಷ್ಣಾತರಾಗಿರುವ ಪಿ.ಎನ್.ಸತ್ಯಾ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯದ ಹೊಣೆ ಹೊತ್ತಿದ್ದು, ಅನೂಪ್ ಸೀನ್ ಸಂಗೀತ ನೀಡಿದ್ದಾರೆ. ಸುದೀಪ್‌ಗೆ ನಾಯಕಿಯಾಗಿ ಮಮತಾ ಮೋಹನ್‌ದಾಸ್ ನಟಿಸಿದ್ದಾರೆ. ಇತರ ಪಾತ್ರಗಳಲ್ಲಿ ಲಕ್ಷ್ಮಣ್, ರೇಖಾ ಕುಮಾರ್, ಭವ್ಯ ಮತ್ತಿತರರು ಇದ್ದಾರೆ.