ರಿಮೇಕ್ ಚಿತ್ರಕ್ಕೆ ಸುದೀಪ್ ಕಾಲ್‌ಶೀಟ್
ಬೆಂಗಳೂರು, ಶನಿವಾರ, 19 ಜನವರಿ 2008( 16:06 IST )
ಬಾಲಿವುಡ್‌ಗೆ ಹಾರಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ನಟ ಸುದೀಪ್ ಹೊಸ ರಿಮೇಕ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಸಾಧು ಕೋಕಿಲಾ ಈ ಚಿತ್ರವನ್ನು ನಿರ್ದೇಶಿಸಲಿದ್ದು ಇದರ ಮೂಲ ಚಿತ್ರ ಮಲಯಾಳಂನಲ್ಲಿ 15 ವರ್ಷಗಳ ಹಿಂದೆ ಬಂದಿದ್ದ ಸ್ಫಟಿಕಂ ಎಂದು ಹೇಳಲಾಗಿದೆ.
ತಮಿಳು ನಟಿ ಖುಷ್ಬೂರವರ ಪತಿ ಸುಂದರಂ ಈಗಾಗಲೇ ಇದನ್ನು ತಮಿಳಿಗೆ ರಿಮೇಕ್ ಮಾಡಿ ಆಗಿದ್ದು, ಕನ್ನಡದ ಆವೃತ್ತಿ ಸದ್ಯದಲ್ಲಿಯೇ ಸೆಟ್ಟೇರಲಿದೆ ಎಂದು ತಿಳಿದುಬಂದಿದೆ. ಡಾ| ವಿಷ್ಣುವರ್ಧನ್ ಅಭಿನಯದ ಏಕದಂತ ಚಿತ್ರವನ್ನು ನಿರ್ಮಿಸಿದ್ದ ಶ್ರೀರಾಮ್ ಮತ್ತು ಗೋಪಿ ಈ ಚಿತ್ರದ ನಿರ್ಮಾಪಕರು.
ರಕ್ತಕಣ್ಣಿರು, ರಾಕ್ಷಸ, ಅನಾಥರು ಹಾಗೂ ಗಂಗೆ ಬಾರೆ ತುಂಗೆ ಬಾರೆ ಚಿತ್ರಗಳನ್ನು ಈಗಾಗಲೇ ನಿರ್ದೇಶಿಸಿರುವ ಸಾಧು ಕೋಕಿಲಾರಿಗೆ ಮಾಧ್ಯಮದ ಮೇಲೆ ಒಳ್ಳೇ ಹಿಡಿತವಿದ್ದು ಈ ಹೊಸ ಚಿತ್ರವನ್ನು ಹೇಗೆ ನಿರ್ವಹಿಸುವರು ಎಂಬ ಬಗ್ಗೆ ಎಲ್ಲರ ಕುತೂಹಲವಿದೆ.