ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಲೆಯನ್ನು ಪೋಷಣೆ ಅಗತ್ಯ ; ಸುಧಾಮೂರ್ತಿ
ಸುದ್ದಿ/ಗಾಸಿಪ್
Feedback Print Bookmark and Share
 
ಕಲೆ ಹಾಗೂ ಕಲಾವಿದರನ್ನು ಗೌರವಿಸುವ ಹಾಗೂ ಪ್ರೋತ್ಸಾಹಿಸುವ ಸತ್ಸಸಂಪ್ರದಾಯಗಳನ್ನು ಕಾರ್ಪೋರೇಟ್ ಸಂಸ್ಥೆಗಳು ಬೆಳೆಸಿಕೊಳ್ಳಬೇಕು ಎಂದು ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ ಸಲಹೆ ಮಾಡಿದ್ದಾರೆ.

ಶನಿವಾರ ಸಂಜೆ ನಗರದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಶ್ರೀಮತಿ ಸುಂದರಿ ಸಂತಾನಂ ಅವರ ಕರಣ ವಿನಿಯೋಗ ಮಾಲಿಕ ಇದರ ಡಿವಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಿಂದೆ ಕಲೆಗೆ ರಾಜಾಶ್ರಯವಿತ್ತು. ಆದರೆ ಇಂದು ಕಲೆಗೆ ರಾಜಕೀಯ ಅರ್ಥಾತ್ ಸರ್ಕಾರದ ಆಶ್ರಯ ಕಡಿಮೆ. ಈ ನಿಟ್ಟಿನಲ್ಲಿ ಖಾಸಗಿ ಕಾರ್ಪೋರೇಟ್ ಸಂಸ್ಥೆಗಳು ಕಲೆಯನ್ನು ಪ್ರೋತ್ಸಾಹಿಸುವ ಹಾಗೂ ಕಲಾವಿದರನ್ನು ಸಮರ್ಪಣಾ ಮನೋಭಾವದಿಂದ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ನುಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಶತವಧಾನಿ ಆರ್. ಗಣೇಶ್ ಮಾತನಾಡಿ ಕರಣ ವಿನಿಯೋಗ ಮಾಲಿಕಾ ಎಂಬ ಈ ವಿನೂತನ ಸಿ.ಡಿ. ನಾಟ್ಯಶಾಸ್ತ್ತ್ರವು ತಿಳಿಸಿರುವ ನೂರೆಂಟು ಕರಣಗಳ ಆನ್ವಯಿಕ ಅಭಿನಯ ಚಿತ್ರಣ. ಅನ್ವಯವಿಲ್ಲದೆ, ಪ್ರಾಯೋಗಿಕವಾದ ಅಳವಡಿಕೆ ಇಲ್ಲದೆ ಯಾವುದೇ ಕಲೆಗೂ ಪೂರ್ಣತೆಯಿಲ್ಲ. ರಸದೃಷ್ಟಿ ಇಲ್ಲದ ಯಾವ ಪ್ರಯೋಗಕ್ಕೂ ಬೆಲೆ ಇಲ್ಲ, ನೆಲೆ ಇಲ್ಲ. ಹೀಗಾಗಿ ಭರತಮುನಿಯು ನಾಟ್ಯಶಾಸ್ತ್ತ್ರದಲ್ಲಿ ನಿರೂಪಿಸಿರುವ, ಅಭಿನವಗುಪ್ತನು ತನ್ನ ಅಭಿನವ ಭಾರತೀ ವ್ಯಾಖ್ಯಾನದಲ್ಲಿ ವಿವರಿಸಿರುವ ನೂರೆಂಟು ಕರಣಗಳ ಪ್ರಾಯೋಗಿಕ ಆಯಾಮವನ್ನು ಶಾಕುಂತಲ, ಮೃಚ್ಛಕಟಿಕ, ರತ್ನಾವಳೀ ಮುಂತಾದ ಪ್ರಸಿದ್ಧ ನಾಟಕಗಳಿಂದ ಹಾಗೂ ರಾಮಾಯಣ, ಮಹಾಭಾರತ ಮತ್ತು ಭಾಗವತವೇ ಮುಂತಾದ ಪುರಾಣಗಳ ಸಂದರ್ಭಗಳನ್ನೂ ಗ್ರಾಮಜೀವನ, ಪ್ರಾಣಿ ಪರಿಸರ, ಪ್ರಕೃತಿ ಸಂಸ್ಕ್ಕತಿ ಸಂಬಂಧಗಳನ್ನೂ ಆಧರಿಸಿ ಹೊಸತಾಗಿ ಬರೆದ ಪದ್ಯಗಳಿಂದ ಗೀತ-ನೃತ್ಯಗಳ ಮೂಲಕ ಹೊಮ್ಮಿಸುವ ಅದ್ಬುತ ಕಾರ್ಯ ಇಲ್ಲಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಶ್ರೀಮತಿ ಸುಂದರಿ ಸಂತಾನಂ ಅವರ ಗುರುಗಳೂ ಆಗಿರುವ ಭರತನಾಟ್ಯ ವಿಶಾರದೆ ಪದ್ಮಭೂಷಣ ಡಾ|| ಪದ್ಮಾ ಸುಬ್ರಹ್ಮಣ್ಯಂ, ಹಿರಿಯ ಸಾಹಿತಿ ಡಾ|| ಎಸ್. ಆರ್. ಲೀಲಾ, ಶ್ರೀಮತಿ ಸುಂದರಿ ಸಂತಾನಂ ಭಾಗವಹಿಸಿದ್ದರು.