ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೊಸ ಮುಖಗಳಿಗೆ ಬಾಬು ಮಣೆ
ಸುದ್ದಿ/ಗಾಸಿಪ್
Feedback Print Bookmark and Share
 
ಕೆಲವೊಬ್ಬರು ಪೋಷಕ ಪಾತ್ರಧಾರಿಗಳನ್ನು ಹೊರತುಪಡಿಸಿ ಪಳಗಿದ ತಾರೆಯರೊಂದಿಗೆ ಕೆಲಸ ಮಾಡಲು ಅಷ್ಟಾಗಿ ಇಷ್ಟಪಡದಿದ್ದ ಪುಟ್ಟಣ್ಣ ಕಣಗಾಲರು ಆದಷ್ಟೂ ಹೊಸ ಮುಖಗಳನ್ನು ಪರಿಚಯಿಸಿ ಅವರಿಂದ ಪ್ರತಿಭೆ ಹೆಕ್ಕಿ ತೆಗೆಯುವಲ್ಲಿ ಸಮರ್ಥರಾಗಿದ್ದರು. ವಿಷ್ಣುವರ್ಧನ್, ರಾಮಕೃಷ್ಣ, ಸುಂದರ ಕೃಷ್ಣ ಅರಸು, ಪದ್ಮಾ ವಾಸಂತಿ, ಅಪರ್ಣಾ, ಶ್ರೀಧರ್‌ರಂತಹ ಕಲಾವಿದರು ಪುಟ್ಟಣ್ಣನವರಿಂದ ಶೋಧಗೊಂಡ ಪ್ರತಿಭೆಗಳೇ.

ಈಗ ಅಂತಹದೊಂದು ಸಾಹಸಕ್ಕೆ ನಿರ್ಮಾಪಕ ಎಸ್.ವಿ.ಬಾಬು ಕೈಹಾಕಿದ್ದಾರೆ. ಅಭಿನಯ ಪ್ರತಿಭೆ ಇರುವ ಹಲವು ವಯೋಮಾನದವರಿಗೆ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಹೊಸ ಮುಖಗಳನ್ನು ಶೋಧಿಸುವ ಪ್ರಯತ್ನಕ್ಕೆ ಅವರು ಕೈಹಾಕಿದ್ದಾರೆ. ಸ್ಯಾಂಡಲ್‌ವುಡ್ ಸ್ಟಾರ್‌ಗಳ ಹುಡುಕಾಟ ಎಂಬ ಹೆಸರಿನ ಈ ಶೋಧದ ನಂತರದ ಎರಡು ತಿಂಗಳಲ್ಲಿ ಶೂಟಿಂಗ್ ಎನ್ನುವುದು ಈ ಯೋಜನೆಯ ವಿಶೇಷ.

ಬಾಬು ನಿರ್ಮಾಣದ ಚಿತ್ರವೊಂದನ್ನು ಶಿವಮಣಿ ನಿರ್ದೇಶಿಸಲಿದ್ದು ಅದರಲ್ಲಿ ಹೀಗೆ ಶೋಧಗೊಂಡ ಹೊಸ ಮುಖಗಳೇ ಕಾಣಿಸಿಕೊಳ್ಳಲಿವೆಯಂತೆ. ಪ್ರತಿಭಾವಂತರು ಎಸ್.ವಿ.ಬಾಬುರವರನ್ನು ಸಂಪರ್ಕಿಸಬಹುದು. ಬಾಬುಗೆ ಆಲ್ ದಿ ಬೆಸ್ಟ್ ಹೇಳೋಣವೇ?