ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಂಗಾತಿಗೆ ಹೋಳಿ ಹಾಡು
ಸುದ್ದಿ/ಗಾಸಿಪ್
Feedback Print Bookmark and Share
 
ಹೋಳಿ ಹಾಡನ್ನು ಒಳಗೊಂಡಿರುವ ಬಹಳಷ್ಟು ಚಿತ್ರಗಳು ಯಶಸ್ವಿಯಾಗಿವೆ. ಹೋಳಿ ಉತ್ತರ ಭಾರತೀಯರ ಸಂಭ್ರಮದ ಹಬ್ಬವಾಗಿರುವುದೂ ಇದಕ್ಕೊಂದು ಕಾರಣವಾಗಿರಬಹುದು. ದಕ್ಷಿಣ ಭಾರತದಲ್ಲಿ ಹೋಳಿ ಹಬ್ಬಕ್ಕೆ ಅಷ್ಟೊಂದು ಪ್ರಾಮುಖ್ಯತೆಯಿಲ್ಲದಿದ್ದರೂ ಹಿಂದಿ ಪ್ರಭಾವದಿಂದಾಗಿ ಇಲ್ಲೂ ಅಷ್ಟಿಷ್ಟು ಹೋಳಿ ಕಂಡುಬರುತ್ತಿದೆ.

ಇದನ್ನರಿತೋ ಏನೋ ಸಂಗಾತಿ ಚಿತ್ರಕ್ಕೆ ಇತ್ತೀಚೆಗೆ ಹೋಳಿ ಹಾಡೊಂದನ್ನು ಚಿತ್ರೀಕರಿಸಲಾಯಿತು. ಕರಿಯ ಬಿಳಿಯ ಇಲ್ಲ ಈ ಓಕುಳಿ ಹಬ್ಬಗಳಲ್ಲಿ ಎಂದು ಪ್ರಾರಂಭವಾಗುವ ಹಾಡನ್ನು ನಾಯಕ ಚೇತನ್ ಹಾಗೂ ನೂರಾರು ನೃತ್ಯಗಾರರೊಂದಿಗೆ ಬೆಂಗಳೂರಿನ ಗವೀಪುರದಲ್ಲಿ ಚಿತ್ರೀಕರಿಸಲಾಯಿತು.

ಹಂಸಲೇಖಾ ಈ ಹಾಡನ್ನು ಬರೆದಿದ್ದು, ಹರ್ಷ ನೃತ್ಯ ಸಂಯೋಜಿಸಿದ್ದಾರೆ. ವಿದೇಶದಲ್ಲಿ ಚಿತ್ರೀಕರಿಸಬೇಕಾದ ಹಾಡೊಂದು ಬಾಕಿ ಇದ್ದು ಅದು ಮುಗಿದರೆ ಚಿತ್ರೀಕರಣ ಪೂರ್ಣಗೊಂಡಂತೆ ಎಂದಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು. ಕಥೆ-ಚಿತ್ರಕಥೆಯೂ ಅವರದೇ ಅಂತೆ. ಚಿತ್ರದ ಇತರ ತಾರಾಗಣದಲ್ಲಿ ಐಶ್ವರ್ಯ, ಅಭಿಜಿತ್, ಪ್ರತೀಕ್ಷಾ, ಗೀರೀಶ್ ಕಾರ್ನಾಡ್ ಇನ್ನೂ ಮೊದಲಾದವರಿದ್ದಾರೆ.