ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡಕ್ಕೆ ಚಿತ್ರರಂಗಕ್ಕೆ ಮಲಯಾಳಿ ನಿರ್ದೇಶಕ
ಸುದ್ದಿ/ಗಾಸಿಪ್
Feedback Print Bookmark and Share
 
ಮಲಯಾಳದ ಸುಂದರಿಯರು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿರುವುದರ ಕುರಿತು ಹಿಂದೊಮ್ಮೆ ಇದೇ ಅಂಕಣದಲ್ಲಿ ಓದಿದ್ದಿರಿ. ಈ ಬಾರಿಯದು ನಿರ್ದೇಶಕರ ಸರದಿ. ದಿನೇಶ್ ಬಾಬು ಹಾಗೂ ಸೂರ್ಯ ಎಂಬೆರಡು ನಿರ್ದೇಶಕರನ್ನು ಹೊರತುಪಡಿಸಿದರೆ ಮಲಯಾಳಂನ ಚಿತ್ರ ನಿರ್ದೇಶಕರಾರೂ ಸ್ಯಾಂಡಲ್‌ವುಡ್ ಕಡೆ ತಲೆ ಹಾಕಿರಲಿಲ್ಲ. ಈಗ ಅದೂ ನಡೆಯಲಿದೆ.

ಮೂವತ್ತಕ್ಕೂ ಹೆಚ್ಚು ಮಲಯಾಳಂ ಚಿತ್ರಗಳನ್ನು ನಿರ್ದೇಶಿಸಿರುವ ರಾಜಸೇನನ್ ಸುಕುಮಾರ ಎಂಬ ಕನ್ನಡ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಗಳು ಬಂದಿವೆ. ಹೊಸ ಪ್ರತಿಭೆ ಕಾರ್ತಿಕ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದು ಅವರಿಗೆ ನಾಯಕಿಯಾಗಲಿರುವವರು ನಮ್ಮ ಬಸವ ಚಿತ್ರದಲ್ಲಿ ಪುನೀತ್‌ಗೆ ಜೋಡಿಯಾಗಿದ್ದ ಗೌರಿ ಮುಂಜಾಲ್.

ಈಗಾಗಲೇ ಎಲ್ಲರ ಗಮನ ಸೆಳೆದಿರುವ ಕಾನ್ಪಿಡೆಂಟ್ ಗ್ರೂಪ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಲಿರುವುದು ಗಮನಾರ್ಹ ಅಂಶವಾಗಿದ್ದು, ಕಥೆ-ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರಂತೆ. ರಮೇಶ್ ಭಟ್, ದೊಡ್ಡಣ್ಣ, ವಿನಯಾ ಪ್ರಕಾಶ್ ತಾರಾಗಣದಲ್ಲಿರುವ ಇತರರು.