ಎಚ್.ಕೆ.ಶ್ರೀನಿವಾಸರಿಂದ ಕುರುನಾಡು ಚಿತ್ರ
ಬೆಂಗಳೂರು, ಬುಧವಾರ, 23 ಜನವರಿ 2008( 12:26 IST )
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುದೊಂದು ಮಾತಿದೆ. ಸಮಾಜದ ಒಳಿತಿಗಾಗಿ ಎಷ್ಟೆಲ್ಲಾ ಹೆಣಗುವ ಹೆಣ್ಣಿಗೆ ಅಬಲೆಯೆಂಬ ಪಟ್ಟ ಕಟ್ಟಿ ಮೂಲೆ ಗುಂಪಾಗಿಸಿದೆ ನಮ್ಮ ಸಮಾಜ. ಆದರೆ ಏನನ್ನು ಬೇಕಾದರೂ ಸಾಧಿಸುವ ಸಂಕಲ್ಪ ಶಕ್ತಿ ಹೆಣ್ಣಿಗಿದೆ ಎಂಬುದನ್ನು ತಮ್ಮ ನಿರ್ಮಾಣದ ಚಿತ್ರದ ಮೂಲಕ ತಿಳಿಹೇಳ ಹೊರಟಿದ್ದಾರೆ ಎಚ್.ಕೆ.ಶ್ರೀನಿವಾಸ್.
ಶುದ್ಧ ಅನಾಗರಿಕರಂತೆ ಬದುಕುತ್ತಿದ್ದ ಕುರುನಾಡು ಎಂಬ ಊರಿನ ಜನರನ್ನು ನಾಗರಿಕರನ್ನಾಗಿಸಿ ಊರಿನ ಸರ್ವತೋಮುಖ ಅಭಿವೃದ್ದಿಗೆ ಕಾರಣಳಾಗುವ ಹೆಣ್ಣಿನ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಜಿ.ಮೂರ್ತಿ ನಿರ್ದೇಶಿಸಿದ್ದಾರೆ. ಕಥೆ-ಚಿತ್ರಕಥೆಯೂ ಅವರದೇ. ಸಂಗೀತ ಗಾರುಡಿಗ ಪ್ರವೀಣ್ ಗೋಡ್ಖಿಂಡಿ ಸಂಗೀತ ನೀಡಿದ್ದರೆ, ರಾಷ್ಟ್ರಕವಿ ಡಾ| ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಒದಗಿಸಿದ್ದಾರೆ.
ಕಿರುತೆರೆಯ ಪ್ರತಿಭೆ ಲಕ್ಷ್ಮಿ ಹೆಗಡೆ, ಎಚ್.ಜಿ.ದತ್ತಾತ್ರೇಯ, ಕಾರ್ತಿಕ್, ಸುಶೀಲ ಕೃಷ್ಣಮೂರ್ತಿ ಮೊದಲಾದವರ ತಾರಾಗಣವಿರುವ ಈ ಚಿತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.