ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೇಘವರ್ಷಿಣಿಗೆ ಕ್ಯಾಮೆರಾ ಹಿಡಿಯಲಿರುವ ಶಿವರುದ್ರಯ್ಯ
ಸುದ್ದಿ/ಗಾಸಿಪ್
Feedback Print Bookmark and Share
 
ನಿಮಗೆ ನಿರ್ದೇಶಕ ಶಿವರುದ್ರಯ್ಯನವರ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಚೈತ್ರದ ಚಿಗುರು, ಅಮಾಸ ಹಾಗೂ ದಾಟು ಎಂಬ ಚಿತ್ರಗಳನ್ನು ನಿರ್ದೇಶಿಸಿವದರು ಇವರೇ. ಅವುಗಳಲ್ಲಿ ಪ್ರಶಸ್ತಿ ವಿಜೇತ ಚೈತ್ರದ ಚಿಗುರು ಚಿತ್ರದ ಚಿಲಿಪಿಲಿ ಹೇಳುತಿತ್ತವ್ವಾ.. ಎಂಬ ಹಾಡು ಇಂದಿಗೂ ಜನಪ್ರಿಯ.

ಶಿವರುದ್ರಯ್ಯ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಸಾಯಿಸುತೆಯವರ ಕಾದಂಬರಿ ಆಧರಿಸಿದ ಮೇಘವರ್ಷಿಣಿ ಎಂಬ ಹೊಸ ಚಿತ್ರ ಸೆಟ್ಟೇರಿದ್ದು ಅದಕ್ಕಾಗಿ ಚಿಕ್ಕಮಗಳೂರು, ಕೊಟ್ಟಿಗೆ ಹಾರ, ಕುಶಾಲನಗರ ಮುಂತಾದ ರಮಣೀಯ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿದುಬಂದಿದೆ.

ಗೀತರಚನೆಗಾಗಿ ಸಾಹಿತಿಗಳ ದಂಡೇ ಸೇರಿದ್ದು ಜಯಂತ್‌ ಕಾಯ್ಕಿಣಿ, ನಾಗತಿಹಳ್ಳಿ ಚಂದ್ರಶೇಖರ್, ಆನಂದ್ ಹಾಗೂ ಕೆ.ಕಲ್ಯಾಣ್ ಅದ್ಬುತವಾದ ಗೀತೆಗಳನ್ನು ರಚಿಸಿಕೊಟ್ಟಿದ್ದಾರೆಂಬುದು ವಿಶೇಷ ಸುದ್ದಿ. ಆರ್ಯ ಮತ್ತು ಅರ್ಚನಾ, ನಾಯಕ-ನಾಯಕಿ ಪಾತ್ರಗಳನ್ನು ನಿರ್ವಹಿಸುತ್ತಿದ್ದು ಚಿತ್ರದ ಉಳಿದ ತಾರಾಗಣದಲ್ಲಿ ಅನಂತ್‌ನಾಗ್, ರಮೇಶ್‌ಭಟ್, ಪದ್ಮಜಾರಾವ್, ಅವಿನಾಶ್ ಮೊದಲಾದವರಿದ್ದಾರೆ.