ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಲೌಕಿಕದಿಂದ ಲೌಕಿಕ ಚಿತ್ರದೆಡೆಗೆ ಪಲ್ಲಕ್ಕಿ ರಾಧಾಕೃಷ್ಣ
ಸುದ್ದಿ/ಗಾಸಿಪ್
Feedback Print Bookmark and Share
 
ಸಾಯಿಕುಮಾರ್ ಅಭಿನಯದ ಕೈವಾರ ತಾತಯ್ಯ ಚಿತ್ರ ನೆನಪಿದೆಯೇ? ಸಂಪೂರ್ಣ ಸಾತ್ವಿಕತೆಯಿಂದ ತುಂಬಿದ್ದ ಈ ಚಿತ್ರದ ಮಂಗಳಂ ಅಮರ ನಾರೇಯಣಗೇಳಿ ಎಂಬ ಹಾಡನ್ನು ನೀವು ನೋಡಿರಲಿಕ್ಕೂ ಸಾಕು.

ಈ ಚಿತ್ರದ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಮತ್ತೊಂದು ಚಿತ್ರದ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. ಆದರಿದು ಪಕ್ಕಾ ಕಮರ್ಷಿಯಲ್ ಚಿತ್ರ ಎಂಬುದು ವಿಶೇಷ.

ದೇವನಹಳ್ಳಿಯ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೇಳಲಿರುವ ಕಾರಣದಿಂದ ಅಲ್ಲಿನ ಕೆಲ ಬಡಕುಟುಂಬಗಳು ಏನೆಲ್ಲಾ ಸಮಸ್ಯೆ ಎದುರಿಸಲಿವೆ ಎಂಬ ಕಥೆಯನ್ನು ಈ ಚಿತ್ರ ಹೊಂದಿದೆಯಂತೆ. ಆದ್ದರಿಂದಲೇ ಈ ಚಿತ್ರಕ್ಕೆ ದೇವನಹಳ್ಳಿ ಎಂದೇ ಹೆಸರಿಡಲಾಗಿದೆ ಎಂಬುದು ವಿಶೇಷ.

ರಾಹುಲ್, ವಿಕ್ರಂ ಕೇಸರಿ, ಸುಮನ್, ಭರತ್ ಸಂಚಾರಿ ಹೀಗೆ ಹೊಸ ಕಲಾವಿದರನ್ನೇ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ರಾಜಶೇಖರ್ ಬುರುಡೇಕಟ್ಟೆ ಗೀತೆಗಳನ್ನು ರಚಿಸಲಿದ್ದಾರೆ ಎಂದು ತಿಳಿದುಬಂದಿದೆ.