ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ ಬಣ್ಣ ಹಚ್ಚಲಿರುವ ಖೇಣಿ
ಸುದ್ದಿ/ಗಾಸಿಪ್
Feedback Print Bookmark and Share
 
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಹಿಂದಿ ಚಿತ್ರವೊಂದನ್ನು ನಿರ್ಮಿಸುತ್ತಿರುವ ಅಶೋಕ್ ಖೇಣಿಯವರಿಗೆ ಈ ರಂಗದಲ್ಲಿ ಹೊಸತನವನ್ನೇನಾದರೂ ನೀಡುವ ಮಹದಾಸೆ ಇದ್ದಂತಿದೆ.

ಮರುಜನ್ಮ ಚಿತ್ರದಲ್ಲಿ ಮಹಾರಾಜನ ವೇಷ ಧರಿಸಿದ್ದ ಈ ಉದ್ಯಮಿಯನ್ನು ಬಣ್ಣದ ಬೆಡಗು ಮತ್ತೊಮ್ಮೆ ಸೆಳೆದಂತಿದೆ. ಮಚ್ಚಾ ಚಿತ್ರಕ್ಕಾಗಿ ಅವರು ಮತ್ತೆ ಬಣ್ಣ ಹಚ್ಚಲಿರುವುದು ಇದನ್ನು ಸಾಬೀತುಪಡಿಸುವಂತಿದೆ.

ರೌಡಿಸಂ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಜೀವನ್ ಎನ್ನುವ ಹುಡುಗ ನಾಯಕನ ಪಾತ್ರ ವಹಿಸುತ್ತಿದ್ದರೆ ಖೇಣಿಯವರು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಣೆ ಮಾಡಲಿದ್ದಾರೆ.

ಈಗಾಗಲೇ ರಾಕ್‌ಲೈನ್ ಸ್ಡುಡಿಯೋದಲ್ಲಿ ಕೆಲ ಭಾಗಗಳ ಚಿತ್ರೀಕರಣ ನಡೆದಿದ್ದು, ಹೊರಾಂಗಣ ಚಿತ್ರೀಕರಣ ಬೆಂಗಳೂರು, ಮಡಿಕೇರಿಯ ವಿವಿಧ ಭಾಗಗಳಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.