ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕ್ಲಾಸು ಮುಗಿದ ಮೇಲೆ ಪರೀಕ್ಷೆ
ಸುದ್ದಿ/ಗಾಸಿಪ್
Feedback Print Bookmark and Share
 
ಟೆನ್ತ್ ಕ್ಲಾಸ್ ಎ ಸೆಕ್ಷನ್ ಮತ್ತೊಂದು ವಿಭಿನ್ನ ಹೆಸರಿನ ಚಿತ್ರ, ಚಿತ್ರೀಕರಣದ ಕ್ಲಾಸ್ ಮುಗಿಸುವ ಹಂತದಲ್ಲಿದ್ದು ಚಿತ್ರ ಬಿಡುಗಡೆ ಎಂಬ ಪ್ರೇಕ್ಷಕರ ಪರೀಕ್ಷೆಗಳಿಗೆ ಅಣಿಯಾಗುವ ಹಂತದಲ್ಲಿದೆ.

ಹತ್ತನೇ ತರಗತಿಯಲ್ಲಿ ಓದುವ ಓರ್ವ ಹುಡುಗ ಪ್ರೀತಿ-ಪ್ರೇಮಗಳ ಹುಚ್ಚನ್ನು ತಲೆಗೆ ಹತ್ತಿಸಿಕೊಂಡು ಯಾವ್ಯಾವ ತೊಂದರೆ ಅನುಭವಿಸುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಮನಮುಟ್ಟುವಂತೆ ಹೇಳಲಾಗಿದೆಯಂತೆ. ಚಿತ್ರದ ಕಥೆಯ ತಿರುಳನ್ನು ಕೇಳಿದರೆ ಇದು ಮತ್ತೊಂದು ಚೆಲುವಿನ ಚಿತ್ತಾರ ಆಗುವುದೇ ಎಂಬ ಕುತೂಹಲ ಮೂಡುವುದು ಸಹಜ. ಯಾವುದಕ್ಕೂ ಇನ್ನಷ್ಟು ದಿನ ಕಾಯಲೇಬೇಕು.

21 ದಿನಗಳ ಸತತ ಚಿತ್ರೀಕರಣ ನಡೆಸುವುದರ ಮೂಲಕ ಚಿತ್ರೀಕರಣ ಅಂತಿಮ ಹಂತ ತಲುಪಿದೆ. 6 ಹಾಡುಗಳು ಮತ್ತು 3 ಚುಟುಕು ಗೀತೆಗಳಿಗೆ ಕೃಪಾಕರ್ ಸಂಗೀತ ಸಂಯೋಜಿಸಿದ್ದಾರಂತೆ ಚಿತ್ರದ ನಿರ್ದೇಶಕರು. ದಿಲ್ ಎಂಬದೇ ಸತ್ಯವೋ, ಕಠೋರ ವಾಸ್ತವವೇ ಸತ್ಯವೋ ಎಂಬುದು ಬಿಡುಗಡೆಯ ನಂತರವೇ ತಿಳೀದೀತು.