ಆದಿ ಲೋಕೇಶ್ ಬಿಡ್ಡನಿಗೆ ರೀರೆಕಾರ್ಡಿಂಗ್
ಬೆಂಗಳೂರು, ಶುಕ್ರವಾರ, 25 ಜನವರಿ 2008( 11:40 IST )
ಪ್ರೇಮ್ ನಿರ್ದೇಶನದ ಜೋಗಿ ಚಿತ್ರ ಶಿವಣ್ಣ, ಪ್ರೇಮ್, ಗುರುಕಿರಣ್, ಅಶ್ವಿನಿ ಹೆಸರು ತಂದುಕೊಟ್ಟಂತೆಯೇ ಅದರ ವಿಕ್ಷಿಪ್ತ ಪಾತ್ರವೊಂದರಲ್ಲಿ ನಟಿಸಿದ್ದ ಆದಿ ಲೋಕೇಶ್‌ಗೂ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿತು.
ಬಿಡ್ಡ ಎಂಬ ಹೆಸರಿನ ಆ ಪಾತ್ರ ನಿರ್ವಹಣೆ ಎಲ್ಲರ ಮನಸೂರೆಗೊಂಡಿದ್ದೇ ಅಲ್ಲದೇ ಆದಿ ಲೋಕೇಶ್‌ರವರು ಪೂಜಾರಿ ಎಂಬ ಚಿತ್ರದ ನಾಯಕನಾಗುವ ಹಂತಕ್ಕೂ ತಂದುಮುಟ್ಟಿಸಿತು.
ಈಗ ಬಿಡ್ಡ ಎಂಬ ಹೆಸರಿನ ಚಿತ್ರವೇ ನಿರ್ಮಾಣಗೊಂಡಿದ್ದು ಅದರ ರೀರೆಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕಾರ್ಯ ಸಂಪೂರ್ಣಗೊಂಡಿದೆ. ಚಿತ್ರ ಫೆಬ್ರವರಿಯಲ್ಲಿ ತೆರೆಕಾಣಲಿದೆ ಎಂದು ತಿಳಿದುಬಂದಿದೆ.
ಚಿತ್ರದ ಇತರ ತಾರಾಗಣದಲ್ಲಿ ಯಾಮಿನಿ ಶರ್ಮ, ರಂಗಾಯಣ ರಘು, ಉಮಾಶ್ರೀ, ಶರತ್ ಲೋಹಿತಾಶ್ವ, ಜೈ ಜಗದೀಶ್ ಮೊದಲಾದವರಿದ್ದು, ವೆಂಕಟ್‌ನಾರಾಯಣ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಪದ್ಮನಾಭ್ ಅವರದು. ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ ವಿಶ್ವ ಅವರದು.