ತಬ್ಬಲಿಗೆ ಆಸರೆಯಾದ ಮೂಗೂರು ಸುಂದರಂ
ಬೆಂಗಳೂರು, ಶುಕ್ರವಾರ, 25 ಜನವರಿ 2008( 12:44 IST )
ನೃತ್ಯ ನಿರ್ದೇಶಕ ಮೂಗೂರು ಸುಂದರಂ ಎಂದರೆ ಕೆಲವರಿಗೆ ಥಟ್ಟನೇ ಅವರ ಗುರುತು ಸಿಕ್ಕದಿರಬಹುದು. ಖ್ಯಾತ ತಮಿಳು ಚಿತ್ರನಟ ಪ್ರಭುದೇವರ ಅಪ್ಪ ಈ ಮೂಗೂರು ಸುಂದರಂ. ತಬ್ಬಲಿ ಚಿತ್ರದ ಒಂದು ಗೀತೆಗೆ ಅವರು ನೃತ್ಯ ನಿರ್ದೇಶನ ಮಾಡಿರುವುದಲ್ಲದೇ ಅಭಿನಯವನ್ನೂ ನೀಡಿರುವುದು ಒಂದು ವಿಶೇಷ.
ಎನ್.ಲೋಕಿಯವರ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವಿರುವ ತಬ್ಬಲಿ ಚಿತ್ರದಲ್ಲಿ 40 ಮಂದಿ ನೃತ್ಯಗಾರರೊಂದಿಗೆ ಗೋಸಾಯಿಘಾಟ್ ಬಳಿ ಏಳು ಮಲೈ ಮಾದೇಶ ಎಂಬ ಗೀತೆಯಲ್ಲಿ ಮೂಗೂರು ಸುಂದರಂ ತಮ್ಮ ಚಾಕಚಕ್ಯತೆಯನ್ನು ಮೆರೆದರು ಎಂದು ಚಿತ್ರತಂಡ ತಿಳಿಸಿದೆ.
ಆಕಾಶ್, ಮೇಘಶ್ರೀ ರವರಂತಹ ಹೊಸ ಕಲಾವಿದರೊಂದಿಗೆ ಸಾಧುಕೋಕಿಲಾ, ಚಾರುಲತಾ, ಮೈನಾ ಚಂದ್ರು ಮೊದಲಾದ ಕಲಾವಿದರೂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಂ.ಪುಟ್ಟಸ್ವಾಮಿ.