ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೀಗೊಂದು ಹೊಸ ಚಿತ್ರ: ಟ್ಯಾಕ್ಸಿ ನಂ.1
ಸುದ್ದಿ/ಗಾಸಿಪ್
Feedback Print Bookmark and Share
 
ನಂ.1 ಶ್ರೇಣಿಯ ಚಿತ್ರಗಳಲ್ಲಿ ಮಿಂಚಿದವರು ಹಿಂದಿ ನಟ ಗೋವಿಂದ. ಹೀರೋ ನಂ.1, ಕೂಲಿ ನಂ.1, ಆಂಟಿ ನಂ.1 ಇವೇ ಮೊದಲಾದ ಚಿತ್ರಗಳಿಂದ ಗೋವಿಂದ ಫೇಮಸ್ ಆಗಿರೋದು ಬಾಲಿವುಡ್ನಿಂದ ಸ್ಯಾಂಡಲ್‌ವುಡ್‌ಗೆ ಗೊತ್ತಿರುವ ವಿಷಯವೇ. ಇದರಿಂದ ಪ್ರೇರಿತರಾಗಿಯೋ ಏನೋ ನಮ್ಮ ಕೂಡ್ಲು ರಾಮಕೃಷ್ಣ ಈ ಹಿಂದೆ ಪ್ರೇಮಾ-ರಮೇಶ್ ಜೋಡಿಯಲ್ಲಿ ಪ್ರೇಮಿ ನಂ.1 ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.

ಈಗ ಈ ನಂ.1 ವಿಷಯ ಏಕೆ ಬಂತೆಂದರೆ, ಟ್ಯಾಕ್ಸಿ ನಂ.1 ಎಂಬ ಹೊಸ ಚಿತ್ರವೊಂದು ಪ್ರಾರಂಭವಾಗಿದೆ. ವಿಶೇಷವೆಂದರೆ ಇದು ಯಾವುದೇ ವ್ಯಕ್ತಿಯ ಅಥವಾ ವೃತ್ತಿಯ ಕುರಿತಾಗಿಲ್ಲ. ಟ್ಯಾಕ್ಸಿಗೂ ಹೀಗೆ ನಂಬರ್ ಕೊಡಬಹುದು ಎಂಬ ಕಲ್ಪನೆ ಕೊಂಚ ವಿಭಿನ್ನವಾಗಿದೆ.

ಪ್ರಭಾಕರ್, ಗೀತಾ ಮತ್ತು ನಿಖಿತಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದ ನಿದೇರ್ಶಕರು ಸ್ವತಃ ಪ್ರಭಾಕರ್ ಅವರೇ. ಕಥೆ-ಚಿತ್ರಕಥೆಯೂ ಅವರದೇ ಎಂಬ ಮಾಹಿತಿ ಅವರ ಬಹುಮುಖ ಪ್ರತಿಭೆಯ ಕುರಿತಾಗಿ ಹೇಳುತ್ತದೆ. ಈಗಾಗಲೇ ಕುಮಟಾ ಸುತ್ತಮುತ್ತ ಹಾಡುಗಳ ಚಿತ್ರೀಕರಣ ನಡೆಸಲಾಗಿದೆ. ವಿಜಯಕಾಶಿ, ಪದ್ಮಜಾರಾವ್, ಪದ್ಮಿನಿ, ಮನದೀಪ್‌ ರಾಯ್ ಮೊದಲಾದವರು ತಾರಾಗಣದಲ್ಲಿರುವ ಇತರರು.