ಸತತ ಚಿತ್ರೀಕರಣದಲ್ಲಿ ಮಿಂಚು
ಬೆಂಗಳೂರು, ಶನಿವಾರ, 26 ಜನವರಿ 2008( 16:58 IST )
ನಿರ್ದೇಶಕ ವಿಶಾಲ್‌ರಾಜ್ ಎಂದರೆ ಬಹಳ ಜನಕ್ಕೆ ಅರ್ಥವಾಗುವುದಿಲ್ಲ. ಏಕೆಂದರೆ ಇವರು ಪ್ರಚಾರಕ್ಕೆ ಹಾತೊರೆದ-ಹಾತೊರೆಯುವ ಆಸಾಮಿಯಲ್ಲ.
ಆದರೆ ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ದ ಅಭಿನಯ ತರಬೇತಿ ಪಡೆದುಬಂದವರನ್ನೇ ವಿಶಾಲ್‌ರಾಜ್ ಬಗ್ಗೆ ಕೇಳಿದರೆ ಅವರ ಮುಖ ಅರಳುತ್ತದೆ. ಕಾರಣ ವಿಶಾಲ್‌ರಾಜ್ ಆದರ್ಶ ಸಂಸ್ಥೆಯ ಅಭಿನಯ ತರಬೇತಿ ವಿಭಾಗದಲ್ಲಿ ಕಂಡು ಬರುವ ಮಹತ್ವದ ಹೆಸರು. ನಮ್ಮ ಸೂಪರ್ ಸ್ಟಾರ್-ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಇವರ ಗರಡಿಯಲ್ಲಿಯೇ ಪಳಗಿದವರು ಎಂಬುದು ವಿಶೇಷ.
ಇಂಥ ಅಪ್ಪಟ ಪ್ರತಿಭಾವಂತ ವಿಶಾಲ್‌ರಾಜ್ ಸದ್ದಿಲ್ಲದೆ ಚಿತ್ರವೊಂದರ ಕುಸುರಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ನಿರ್ದೇಶನದ ಮಿಂಚು ಚಿತ್ರಕ್ಕೆ ಚಿಕ್ಕಮಗಳೂರಿನಲ್ಲಿ ಸತತ ಚಿತ್ರೀಕರಣ ನಡೆಸಿದ ನಂತರ ತಂಡ ಬೆಂಗಳೂರಿಗೆ ಮರಳಿದೆ.
ನಿರಾಶೆಗೊಳಗಾದ ಯುವಕರ ಮನಸ್ಥಿತಿಯನ್ನು ಒಳಗೊಂಡ ಈ ಪ್ರೇಮಕಥಾ ಚಿತ್ರದ ಕಥೆ-ಚಿತ್ರಕಥೆಯನ್ನೂ ವಿಶಾಲ್‌ರಾಜ್ ನಿರ್ವಹಿಸಿದ್ದಾರೆ. ವೇಣುಗೋಪಾಲ್ ನಾಯಕ್ ಮತ್ತು ಸೋದರರು ಈ ಚಿತ್ರದ ನಿರ್ಮಾಪಕರು.