ಮತ್ತೊಂದು ಕಾಲೇಜ್ ಚಿತ್ರ
ಬೆಂಗಳೂರು, ಶನಿವಾರ, 26 ಜನವರಿ 2008( 11:30 IST )
ಕ್ರೇಜಿ ಸ್ಟಾರ್ ರವಿಚಂದ್ರನ್ರವರು ತಮ್ಮ ಸೋದರನನ್ನು ನಾಯಕನನ್ನಾಗಿಸಿ ಕಾಲೇಜ್ ಎಂಬ ಚಿತ್ರ ನಿರ್ದೇಶಿಸಲು ಯೋಜಿಸಿದ್ದರೂ ಅದು ಕೈಗೂಡಲಿಲ್ಲ. ಇದು ಮತ್ತೊಂದು ಪ್ರೇಮಲೋಕ ಚಿತ್ರವಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ಇದಕ್ಕೂ ಮುಂಚೆ ವಿನೋದ್‌ರಾಜ್ ನಾಯಕತ್ವದ ಕಾಲೇಜ್ ಹೀರೋ ಎಂಬ ಚಿತ್ರವೂ ಬಂದಿತ್ತು.
ಈಗ ಕಾಲೇಜ್ ಕಾಲೇಜ್ ಎಂಬ ಹೊಸ ಚಿತ್ರವೊಂದು ನಿರ್ಮಾಣದ ಹಂತದಲ್ಲಿದೆ. ಈ ಚಿತ್ರದ ಡಬ್ಬಿಂಗ್, ರೀರೆಕಾರ್ಡಿಂಗ್, ಡಿಟಿಎಸ್ ಕಾರ್ಯಗಳು ಮುಗಿದಿದ್ದು ಒಂದು ಗೀತೆಯ ಚಿತ್ರೀಕರಣ ಬಾಕಿಯಿದೆಯಂತೆ.
ಚಿತ್ರ ಸಂಭಾಷಣೆಯಲ್ಲಿ ದಿನದಿಂದ ದಿನಕ್ಕೆ ಖ್ಯಾತಿ ಗಳಿಸುತ್ತಿರುವ ಮಳವಳ್ಳಿ ಸಾಯಿಕೃಷ್ಣ ಇದರ ಸಂಭಾಷಣೆ ರಚಿಸಿದ್ದು, ಕೆ.ಕಲ್ಯಾಣ್, ಎಂ.ಎನ್.ವ್ಯಾಸರಾವ್, ನಾಗೇಂದ್ರ ಪ್ರಸಾದ್ ಮೊದಲಾದವರು ಗೀತೆಗಳನ್ನು ರಚಿಸಿದ್ದಾರೆ. ಮದನ್, ಆದಿತ್ಯ, ಶರಣ್, ಮೈಕೇಲ್ ಮಧು, ಕೇತ್ ಕಾಶಿ ಮೊದಲಾದವರ ತಾರಾಗಣವಿರುವ ಈ ಚಿತ್ರದ ನಿರ್ದೇಶಕರು ಜಗದೀಶ್ ಕೊಪ್ಪ.