ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿರುತೆರೆಯ ಪಾಂಡುಗಳು ಹಿರಿತೆರೆಗೆ
ಸುದ್ದಿ/ಗಾಸಿಪ್
Feedback Print Bookmark and Share
 
ಸಿಹಿಕಹಿ ಚಂದ್ರುರವರ ಪಾಪ ಪಾಂಡು ಧಾರಾವಾಹಿಯಲ್ಲಿ ಪಾಂಡು ಪಾತ್ರಧಾರಿ ಚಿದಾನಂದ ಗಳಿಸಿದ ಕೀರ್ತಿ ಅಷ್ಟಿಷ್ಟಲ್ಲ. ಕಾರಣಾಂತರಗಳಿಂದ ಚಿದಾನಂದ ಅದರಿಂದ ಹೊರನಡೆದಾಗ ವಿಧಿಯಿಲ್ಲದೇ ಆ ಜಾಗಕ್ಕೆ ಜಹಾಂಗೀರ್‌ರನ್ನು ಚಂದ್ರು ಹಾಕಿಕೊಂಡರು. ಅವರಿಗೂ ಯಶಸ್ಸು ಸಿಕ್ಕಿತು. ಸ್ವಲ್ಪ ದಿನಗಳ ನಂತರ ಒಂದಷ್ಟು ಎಪಿಸೋಡ್‌ಗಳಲ್ಲಿ ನಟಿಸಿದ ಚಿದಾನಂದ ಮತ್ತೆ ಮುಖ ತೋರಿಸಲಿಲ್ಲ.

ಈಗ ಈ ಮಾತೇಕೆ ಬಂತೆಂದರೆ, ಈ ಇಬ್ಬರೂ ಪಾಂಡುಗಳೂ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಸಿಂಗಾಪುರದಲ್ಲಿ ಶಂಭುಲಿಂಗ ಎಂಬ ಈ ಹಾಸ್ಯ ಚಿತ್ರ ಬಿಡುಗಡೆಯಾಗಿದ್ದು ಹಾಸ್ಯಚಿತ್ರಗಳ ಶ್ರೇಣಿಗೆ ಮತ್ತೊಂದು ಸೇರ್ಪಡೆಯಾಗಿದೆ.

ನಾಯಕಿಯನ್ನು ಹುಡುಕಿಕೊಂಡು ಕಾಣದ ದೇಶಕ್ಕೆ ಹೋಗುವ ಈ ನಾಯಕರು ಅಲ್ಲಿ ಅನುಭವಿಸುವ ಎಡವಟ್ಟುಗಳನ್ನು ಈ ಚಿತ್ರದಲ್ಲಿ ನಿರ್ದೇಶಕ ಬಿ.ಆರ್.ಕೇಶವ ತೋರಿಸಿದ್ದಾರೆ. ಚಿತ್ರದ ಇತರ ತಾರಾಗಣದಲ್ಲಿ ಸೀಮಾ, ಸ್ವಸ್ತಿಕ್ ಶಂಕರ್ ಮೊದಲಾದವರಿದ್ದಾರೆ.