ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಂದಾಕಿನಿಯಲ್ಲಿ ಹಿರಿಮೆಯ ಹಾಡು
ಸುದ್ದಿ/ಗಾಸಿಪ್
Feedback Print Bookmark and Share
 
ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮಸಣದ ಹೂವು ಚಿತ್ರದ ಚಿತ್ರೀಕರಣವನ್ನು ನಡೆಸುವಾಗ ಇದೊಂದು ಮಾಸ್ಟರ್ ಪೀಸ್ ಆಗಬೇಕು ಎಂದು ಬಯಸಿದ್ದರಂತೆ. ಆದ್ದರಿಂದ ಚಿತ್ರದಲ್ಲಿ ಕನ್ನಡ ನಾಡಿನ ಕರಾವಳಿಯ ಇತಿಹಾಸ-ಪರಂಪರೆಯನ್ನು ಸಾರುವ ಗೀತೆಯೊಂದನ್ನು ಸೇರಿಸಿದ್ದರು.

ಈಗ ಅದೇ ಪರಂಪರೆ ಮುಂದುವರೆದಿದೆ. ಬಿ.ಕೆ.ಶ್ರೀನಿವಾಸ್ ನಿರ್ಮಿಸುತ್ತಿರುವ ಮಂದಾಕಿನಿ ಚಿತ್ರದಲ್ಲಿ ಕನ್ನಡ ನಾಡಿನ ಹಿರಿಮೆ ಸಾರುವ ಸುಮಾರು 11 ನಿಮಿಷ ಅವಧಿಯ ಗೀತೆಯೊಂದನ್ನು ಸೇರಿಸಲಾಗಿದೆಯಂತೆ. ಈ ಗೀತೆಗಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮೈಸೂರು, ಕಾರವಾರ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ, ಹಂಪೆ ಮತ್ತು ಗುಲ್ಬರ್ಗಾ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿರುವುದು ಮತ್ತೊಂದು ವಿಶೇಷ.

ರಮೇಶ್ ಸುರ್ವೆಯವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದುನಿಯಾ ಖ್ಯಾತಿಯ ರಶ್ಮಿ, ಚೇತನ್, ಜಯಂತಿ, ಸುಧಾರಾಣಿ ಮೊದಲಾದವರಿದ್ದಾರೆ. ಕೆ.ಕಲ್ಯಾಣ್ ಸಾಹಿತ್ಯ-ಸಂಗೀತ ಒದಗಿಸಿದ್ದರೆ, ಛಾಯಾಗ್ರಾಹಣ ಪಿ.ಕೆ.ಎಚ್.ದಾಸ್‌ ಅವರದು.