ಭೀಮೂಸ್ ಬ್ಯಾಂಗ್‌ನಲ್ಲಿ ಘಟಾನುಘಟಿಗಳ ಸಮ್ಮಿಲನ
ಕನ್ನಡದ ನಾಯಕ ನಟರನ್ನೆಲ್ಲಾ ಹಾಕಿಕೊಂಡು ಮದುವೆಮನೆ ಎಂಬ ಮೆಗಾ ಚಲನಚಿತ್ರವನ್ನು ನಿರ್ದೇಶಿಸಬೇಕೆಂಬುದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಕನಸಾಗಿತ್ತು. ಅದರೆ ಅದೇಕೋ ಈಡೇರಲಿಲ್ಲ. ಅದನ್ನೀಗ ಒಂದು ಹಂತಕ್ಕೆ ನನಸಾಗಿಸಿದ್ದಾರೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು. ಆದರೆ ತಾರೆಯರನ್ನೆಲ್ಲಾ ಒಂದುಗೂಡಿಸಿರುವುದು ಕೇವಲ ಒಂದು ಹಾಡಿನಲ್ಲಿ ಎಂಬುದು ವಿಶೇಷ.
ಬಾಬು ನಿರ್ದೇಶನದ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರದಲ್ಲಿ ಸ್ಟಾರ್ ಸ್ಟಾರ್ ಸ್ಟಾರ್ ಎಂಬ ಗೀತೆಯೊಂದಿದ್ದು ಇದಕ್ಕೆ ಕನ್ನಡ ಚಿತ್ರರಂಗದ ತಾರೆಗಳಾದ ಡಾ| ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜ್ ಕುಮಾರ್, ಜಗ್ಗೇಶ್, ಪುನೀತ್ ರಾಜ್ ಕುಮಾರ್, ದರ್ಶನ್, ರಮೇಶ್, ಆದಿತ್ಯ, ದೊಡ್ಡಣ್ಣ ಮೊದಲಾದವರ ದಂಡೇ ಅಭಿನಯ ನೀಡಿದೆಯಂತೆ.