ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿರಣ್ ಬೇಡಿ ಆಗಲಿದ್ದಾರೆ ಮಾಲಾಶ್ರೀ
ಸುದ್ದಿ/ಗಾಸಿಪ್
Feedback Print Bookmark and Share
 
ತೆಲುಗು ಚಿತ್ರರಂಗದಲ್ಲಿ ಲೇಡಿ ರಾಂಬೋ ಪಾತ್ರಗಳಿಗೆ ಹೆಸರುವಾಸಿಯಾದವರು ನಟಿ ವಿಜಯಶಾಂತಿ. ಕೈನಲ್ಲಿ ಕೊಡಲಿ ಹಿಡಿದು ಅನ್ಯಾಯದ ವಿರುದ್ಧ ಸೆಣೆಸುವ ಪಾತ್ರವನ್ನು ಪ್ರತಿಘಟನ ಚಿತ್ರದಲ್ಲಿ ನಿರ್ವಹಿಸಿದಾಗಿನಿಂದ ಅವರಿಗೆ ಈ ಬಗೆಯ ಅದೆಷ್ಟು ಪಾತ್ರಗಳು ಬಂದವು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಮಾಲಾಶ್ರೀಯವರು ಒಪ್ಪಿಕೊಳ್ಳುತ್ತಿರುವ ಪಾತ್ರಗಳನ್ನು ನೋಡಿದರೆ ಅವರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರಾ ಎನಿಸುತ್ತದೆ. ಎಸ್.ಪಿ.ಭಾರ್ಗವಿ, ದುರ್ಗಿ ಮೊದಲಾದ ಚಿತ್ರಗಳಲ್ಲಿ ಈ ಬಗೆಯ ಸೆಣಸಾಟದ ಪಾತ್ರಗಳನ್ನು ನಿರ್ವಹಿಸಿರುವ ಮಾಲಾಶ್ರೀಯವರ ಇತ್ತೀಚಿನ ಸಾಹಸ ಕಿರಣ್ ಬೇಡಿ ಚಿತ್ರ.

ಈ ಚಿತ್ರದಲ್ಲಿ ಕಿರಣ್ ಬೇಡಿ ಪಾತ್ರವನ್ನು ವಹಿಸಲಿರುವ ಮಾಲಾಶ್ರೀ ಇದಕ್ಕಾಗಿ ನಿವೃತ್ತ ಪೊಲೀಸ್ ಅಧಿಕಾರಿ ಕಿರಣ್ ಬೇಡಿಯವರ ಸೇವಾವಧಿಯ ಸಾಹಸಗಳನ್ನು ಅಧ್ಯಯನ ಮಾಡಿದ್ದಾರೆ. ಓರ್ವ ಮಹಿಳಾ ಪೊಲೀಸ್ ಆಧಿಕಾರಿ ಇಲಾಖೆಯಲ್ಲಿ ಏನೆಲ್ಲಾ ಕಷ್ಟ ಎದುರಿಸಬೇಕಾಗುತ್ತದೆ, ಆಕೆಯ ಸಾಧನೆಗೆ ಸಮಾಜದಲ್ಲಿ ಯಾರೆಲ್ಲಾ ಅಡ್ಡಿಯಾಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಸಮರ್ಥವಾಗಿ ಬಿಂಬಿಸಲಾಗುವುದಂತೆ. ರಾಮು ಎಂಟರ್ಪ್ರೈಸಸ್‌ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ನಿರ್ದೇಶಕರು ಓಂ ಪ್ರಕಾಶ್ ರಾವ್.