ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬುದನ್ನು ಭರ್ಜರಿ ಪ್ರಚಾರದೊಂದಿಗೆ, ಅಗ್ಗದ ಗಿಮಿಕ್‌ನೊಂದಿಗೆ ಹೇಳಲು ಹೋಗಿ, ಪ್ರೀತಿ ಏಕೆ ಥಿಯೇಟರುಗಳಿಂದ ಹೊರಗಿದೆ? ಎಂದು ರಾಮ್-ಪ್ರೇಮ್ ಜೋಡಿ ಆತ್ಮವಿಮರ್ಶೆ ಮಾಡಿಕೊಳ್ಳುವಂತಾಗಿದೆ.
ಆಶ್ಚರ್ಯಕರವೆನ್ನುವಂತೆ ತಮ್ಮ ಸೋಲನ್ನು ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಒಪ್ಪಿಕೊಂಡಿದ್ದಾರೆ. ಚಿತ್ರದ ಬಿಡುಗಡೆಗೂ ಮುಂಚಿತವಾಗಿಯೇ ಇದು ತಮಗೆ ಗೊತ್ತಿತ್ತಾದರೂ ಪ್ರಚಾರದಿಂದ ಗೆಲ್ಲಿಸಬಹುದು ಅಂತ ಅಂದುಕೊಂಡಿದ್ದಕ್ಕೆ ಪ್ರೇಕ್ಷಕರು ಸರಿಯಾದ ತೀರ್ಪು ನೀಡಿದ್ದಾರೆ. ಸದ್ಯದಲ್ಲಿಯೇ ಮತ್ತೊಂದು ಚಿತ್ರ ನಿರ್ಮಿಸಿ ಪ್ರೇಕ್ಷಕರ ನೀರೀಕ್ಷೆಯ ಮಟ್ಟವನ್ನು ಮುಟ್ಟುವುದು ತಮ್ಮ ನಿರ್ಧಾರ ಎಂಬುದು ರಾಮ್ ಪ್ರಸಾದ್ ಪ್ರಾಮಾಣಿಕ ಅಭಿಪ್ರಾಯ.
ಯಶಸ್ಸು ಬಂದಾಗ ಸಾಮಾನ್ಯವಾಗಿ ಯಾರೂ ಆತ್ಮ ವಿಮರ್ಶೆ ಮಾಡಿಕೊಳ್ಳಲು ಹೋಗುವುದಿಲ್ಲ. ಅದರೆ ಸೋತಾಗಲೇ ಇದು ಸಾಧ್ಯ. ತಾನು ಎಲ್ಲಿ ಎಡವಿದೆ ಎಂಬುದನ್ನು ಕಂಡುಕೊಳ್ಳಲು, ಎಚ್ಚರಿಕೆಯಿಂದ ಹೆಜ್ಜೆ ಇಡುವ ಯೋಜನೆಗಳನ್ನು ಮಾಡಲು ಸೋಲು ಅವಕಾಶವನ್ನು ಕಲ್ಪಿಸುತ್ತದೆ ಎಂಬುದು ನಿಸರ್ಗ ಸಹಜ ಸತ್ಯ. ಪ್ರಾಯಶಃ ರಾಮ್ ಪ್ರಸಾದ್ ಹಾಗೂ ಪ್ರೇಮ್ ಇದೇ ಹಂತದಲ್ಲಿದ್ದಾರೆ ಎಂದು ಭಾವಿಸಿ, ಸೋಲು ಗೆಲುವಿನ ಮೆಟ್ಟಿಲು ಎಂಬ ಸಾರ್ವಕಾಲಿಕ ಉಕ್ತಿಯನ್ನು ಅವರಿಗೆ ನೆನಪಿಸಿ ಚಿತ್ರರಸಿಕರಾದ ನಾವೆಲ್ಲಾ ಅವರಿಬ್ಬರನ್ನೂ ಹುರಿದುಂಬಿಸೋಣವೇ?