ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಣ್ಣಾವ್ರ ಕನಸು ನನಸಾಗುತ್ತಿದೆ...
ಸುದ್ದಿ/ಗಾಸಿಪ್
Feedback Print Bookmark and Share
 
ಅಣ್ಣಾವ್ರು ಬದುಕಿರುವಷ್ಟು ದಿನವೂ ಕಲಾವಿದರ ಸಂಘಕ್ಕೊಂದು ಕಟ್ಟಡವಾಗಬೇಕು ಎಂದು ಆಸೆ ಪಡುತ್ತಲೇ ಇದ್ದರು. ಆದರೂ ಅದು ನೆರವೇರಲೇ ಇಲ್ಲ. ಅವರಿಲ್ಲದ ಸಮಯದಲ್ಲಿ ಸಂಘದ ಕಟ್ಟಡದ ಕೆಲಸ ಆರಂಭವಾಗಿದ್ದು, ಈಗ ಅವರಿಲ್ಲದಿದ್ದರೂ ಮೇಲಿಂದಲೇ ಹರಸುತ್ತಿದ್ದಾರೆ ಎಂಬ ಭಾವ ಸಂಘದ ಸದಸ್ಯರಲ್ಲಿ ಮೂಡಿದೆ.

ಕಲಾವಿದರ ಸಂಘದ ಕಟ್ಟಡ ಕಟ್ಟುವ ಮೊದಲ ಹಂತವಾಗಿ ನಿರ್ಮಾಣ ಪ್ರದೇಶದ ಆವರಣದಲ್ಲಿ ಬೋರ್‌ವೆಲ್ ತೋಡಲಾಗಿದೆ. ಪೋಷಕ ನಟ ದೊಡ್ಡಣ್ಣನವರ ನೇತೃತ್ವದಲ್ಲಿ ಹೋಮವನ್ನೂ ನಡೆಸಲಾಗಿದೆಯಂತೆ. 1600 ಚದರಡಿಯ ಈ ಜಾಗದಲ್ಲಿ ತಲೆ ಎತ್ತಲಿರುವ ಭವ್ಯವಾದ ನಾಲ್ಕಂತಸ್ತಿನ ಕಟ್ಟಡ ಕನಸುಗಳ ಸಾಕಾರ ರೂಪವಾಗಲಿದೆ ಎಂಬುದು ಸಂಘದ ಕಾರ್ಯದರ್ಶಿ ಸುಂದರ್‌ರಾಜ್‌ರವರ ಮನದಾಳದ ಮಾತು.

ಡಾ| ವಿಷ್ಣುವರ್ಧನ್, ಅಂಬರೀಶ್, ರಾಜೇಂದ್ರಸಿಂಗ್ ಬಾಬು, ಅರ್ಜುನ್ ಸರ್ಜಾರಂತಹ ಅತಿರಥ-ಮಹಾರಥರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿರುವುದು ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂಬುದು ಕೆಲ ಸದಸ್ಯರ ಅಂಬೋಣ. ಒಟ್ಟಿನಲ್ಲಿ ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲವೇ?