ಸಿಹಿಮುತ್ತು ನೀಡಲಿರುವ ಅಶೋಕ್ ಕಶ್ಯಪ್
ಬೆಂಗಳೂರು, ಬುಧವಾರ, 30 ಜನವರಿ 2008( 12:48 IST )
ಉಲ್ಟಾಪಲ್ಟಾ ಚಿತ್ರವನ್ನು ನೋಡಿದವರು ಚಿತ್ರದ ನಿರ್ದೇಶಕ ಎನ್.ಎಸ್.ಶಂಕರ್, ನಾಯಕ ರಮೇಶ್ ಹಾಗೂ ಚಿತ್ರದ ಇತರ ಪಾತ್ರಧಾರಿಗಳನ್ನು ಮರೆಯುವ ಸಾಧ್ಯತೆಯೇ ಇಲ್ಲ.
ಸಂಜೀವ್ ಕುಮಾರ್ ಅಭಿನಯದ ಅಂಗೂರ್ ಚಿತ್ರದ ಪ್ರೇರಣೆಯಿಂದ(ರಿಮೇಕ್ ಎನ್ನುವುದರ ಮೆದು ರೂಪ!!) ನಿರ್ಮಿಸಲ್ಪಟ್ಟ ಈ ಚಿತ್ರದಲ್ಲಿ ಛಾಯಾಗ್ರಾಹಕ ಅಶೋಕ್ ಕಶ್ಯಪ್‌ರವರೂ ತಮ್ಮ ಪ್ರತಿಭೆಯನ್ನು ಮೆರೆದಿದ್ದರು.
ಅಶೋಕ್‌ಗೆ ರಕ್ತದ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ, ಬೆಂಗಳೂರಿನ ಒತ್ತಡದ ಜೀವನದಿಂದ ದೂರ ಹೋಗಿ ಎಲ್ಲಾದರೂ ಒಂದೆರಡು ವರ್ಷ ವಿಶ್ರಾಂತಿ ತೆಗೆದುಕೊಳ್ಳಲು ಆದೇಶಿಸಿದ್ದು ವೈದ್ಯರು. ಅದರಂತೆ ವಿಶ್ರಾಂತಿ ಪಡೆದು ವಾಪಸ್ ಬಂದಿರುವ ಅಶೋಕ್ ಕಶ್ಯಪ್ ಸದ್ಯದಲ್ಲಿಯೇ ಸಿಹಿಮುತ್ತು ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬುದು ನಿಜವಾದ ಸಿಹಿಸುದ್ದಿ.
ಈಗಾಗಲೇ ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವ ಕಶ್ಯಪ್‌ರಿಗಿರುವುದಲ್ಲದೇ ತಮಿಳಿನಲ್ಲಿ ಚಿತ್ರವೊಂದನ್ನು ಈಗಾಗಲೇ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐವರು ನಾಯಕರಿದ್ದು ಪ್ರಮುಖ ಪಾತ್ರವೊಂದಕ್ಕೆ ಶಿವರಾಜ್ ಕುಮಾರ್‌ರವರನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.