ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಾಡಿನ ಉಯ್ಯಾಲೆಯಲ್ಲಿ ಜಿಂದಗಿ
ಸುದ್ದಿ/ಗಾಸಿಪ್
Feedback Print Bookmark and Share
 
ಸಪ್ತಗಿರಿ ಗ್ರೂಪ್‌ರವರ ಕೊಡುಗೆಯಾದ ಜಿಂದಗಿ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಂಚಲನೆಯನ್ನು ಸೃಷ್ಟಿಸುವ ಎಲ್ಲಾ ಲಕ್ಷಣಗಳಿವೆ. ದುನಿಯಾ ಚಿತ್ರದಲ್ಲಿ ಸಹನಿರ್ಮಾಪಕರಾಗಿದ್ದ ಎ.ಟಿ.ಲೋಕೇಶ್ ಸಂಪೂರ್ಣ ಹೊಸಬರ ಗುಂಪನ್ನು ಕಟ್ಟಿಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವು ಇತ್ತೀಚೆಗೆ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಇದಕ್ಕೂ ಮುನ್ನ ಒಂದು ಗಂಟೆಗೂ ಹೆಚ್ಚಿನ ಅವಧಿಗೆ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದು ಮನರಂಜನಾ ಕಾರ್ಯಕ್ರಮ.

ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದ ಈ ಸಮಾರಂಭದಲ್ಲಿ ಕ್ಯಾಸೆಟ್ ಬಿಡುಗಡೆ ಮಾಡಿದವರು ಡಿ.ಕೆ.ಸೂರಿ. ದುನಿಯಾದಂತೆ ಈ ಚಿತ್ರ ಹಾಗೂ ಚಿತ್ರದ ಧ್ವನಿಸುರುಳಿ ಯಶಸ್ಸನ್ನು ಕಾಣಲಿ ಎಂದು ಸೂರಿ ಈ ಸಂದರ್ಭದಲ್ಲಿ ಹಾರೈಸಿದರು.

ನಿರ್ದೇಶಕ ಮುಗಿಲ್, ನಾಯಕರಾದ ಕಿಶೋರ್ ಮತ್ತು ರಾಜೀವ್, ನಾಯಕಿಯರಾದ ಪ್ರಿಯಾಂಕ ಮತ್ತು ಹೇಮಶ್ರೀ, ಸಹ ನಿರ್ಮಾಪಕ ರಾಜಣ್ಣ, ಅರ್ಜುನ್ ಮ್ಯೂಸಿಕ್ ಸಂಸ್ಥೆಯ ಮಾಲೀಕರಾದ ಗೀರೀಶ್ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.